newsics.com
ಕರೀಂನಗರ(ತೆಲಂಗಾಣ): ಮಾಟ ಮಂತ್ರದ ಮೂಲಕ ವ್ಯಕ್ತಿಯೊಬ್ಬನನ್ನು ಕೊಂದಿದ್ದಾಗಿ ಹೇಳಿಕೊಂಡಿರುವ ಡೋಂಗಿ ಬಾಬಾನನ್ನು ಪೊಲೀಸರು ಬಂಧಿಸಿದ್ದಾರೆ.
ಕೊಂದ ವ್ಯಕ್ತಿಗೆ ಮರುಜನ್ಮ ನೀಡುವುದಾಗಿ ಹೇಳಿ ಆತನನ್ನು ಕೊಂದಿದ್ದಾಗಿ ಪೊಲೀಸ್ ವಿಚಾರಣೆ ವೇಳೆ ಬಾಬಾ ಹೇಳಿದ್ದಾನೆ. ವ್ಯಕ್ತಿ ಮೃತನಾದ ಬಳಿಕ ಆತನನ್ನು ಬದುಕಿಸಲು ಬೆಳಗ್ಗೆಯಿಂದ ಸಂಜೆವರೆಗೂ ಪೂಜೆ ಮಾಡಿದರೂ ಆತನನ್ನು ಬದುಕಿಸಲು ಸಾಧ್ಯವಾಗಲಿಲ್ಲ ಎಂದು ಬಾಬಾ ಪುಲ್ಲಯ್ಯ ಹೇಳಿದ್ದಾನೆ.
ಇಂತಹ ವಿಚಿತ್ರ ಘಟನೆ ತೆಲಂಗಾಣದ ಜಗ್ತಿಯಲ್ ಜಿಲ್ಲೆಯಲ್ಲಿ ನಡೆದಿದೆ. ಮಾಹಿತಿ ತಿಳಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಜಗ್ಟೇಲ್ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಮಂತ್ರವಾದಿ ಪುಲ್ಲಯ್ಯನನ್ನು ವಿಚಾರಣೆಗೊಳಪಡಿಸಿದಾಗ ರಮೇಶ್ ಗೆ ಮರುಜನ್ಮ ನೀಡುವ ಭರವಸೆ ನೀಡಿ, ಆತನನ್ನು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.
ಟಿಆರ್ ನಗರ ನಿವಾಸಿ ರಮೇಶ್ ಮಾಟ- ಮಂತ್ರಕ್ಕೆ ಬಲಿಯಾದ ವ್ಯಕ್ತಿ. ಪುಲ್ಲಯ್ಯ ಎಂಬಾತ ಮಾಟ- ಮಂತ್ರ ಮಾಡಿ ರಮೇಶ್ ನನ್ನು ಕೊಲೆ ಮಾಡಿದ್ದಾನೆ ಎಂದು ಮೃತನ ಕುಟುಂಬ ಸದಸ್ಯರು ಆರೋಪಿಸಿದ್ದಾರೆ.
ಘಟನೆಯಿಂದ ಆಕ್ರೋಶಗೊಂಡಿರುವ ರಮೇಶ್ ಕುಟುಂಬ ಸದಸ್ಯರು ಕರೀಂನಗರ ಹೆದ್ದಾರಿಯಲ್ಲಿ ಪುಲ್ಲಯ್ಯ ವಿರುದ್ಧ ಪ್ರತಿಭಟನೆ ನಡೆಸಿದ್ದಲ್ಲದೆ, ಆತನ ಮನೆಯ ಮೇಲೆ ದಾಳಿ ಮಾಡಿದ್ದಾರೆ.
ಆ.19ರಿಂದ ದ್ವಿತೀಯ ಪಿಯು ಪೂರಕ ಪರೀಕ್ಷೆ : 187 ಕೇಂದ್ರಗಳಲ್ಲಿ ಸಿದ್ಧತೆ
ಏಕ ಬಳಕೆ ಪ್ಲಾಸ್ಟಿಕ್ ವಸ್ತುಗಳ ತಯಾರಿಕೆ, ಮಾರಾಟ ನಿಷೇಧ -ಕೇಂದ್ರ ಸರ್ಕಾರ