newsics.com
ಗುವಾಹಟಿ: ಸಾಮಾನ್ಯವಾಗಿ ದೇಶದೆಲ್ಲೆಡೆ ಕೆರೆ ನೀರಿನ ಮೇಲೆ ಅನಪಯುಕ್ತ ಸಸ್ಯಗಳು ಹುಟ್ಟಿಕೊಳ್ಳುತ್ತಿವೆ. ಇದು ಎರಡು ರೀತಿಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ನೀರನ್ನು ಪೂರ್ತಿಯಾಗಿ ಆವರಿಸಿಕೊಳ್ಳುವ ಕಾರಣ ಅದರ ಬಳಕೆ ಸಾಧ್ಯವಾಗುವುದಿಲ್ಲ. ಎರಡನೆಯದಾಗಿ ಹಕ್ಕಿಗಳು ಈ ನೀರನ್ನು ಬಳಸಲು ಅಶಕ್ತವಾಗುತ್ತವೆ. ವಲಸೆ ಬರುವ ಹಕ್ಕಿಗಳು ಇದರಿಂದಾಗಿ ಬೇರೆ ಕಡೆ ತೆರಳಬೇಕಾದ ಪರಿಸ್ಥಿತಿ ಸೃಷ್ಟಿಯಾಗುತ್ತಿದೆ.
ಆಸ್ಸಾಂನಲ್ಲಿ ಕೂಡ ಇದೇ ರೀತಿಯ ವಾತಾವರಣ ಸೃಷ್ಟಿಯಾಗಿತ್ತು. ಇದೀಗ ಆ ಕೆರೆಯಲ್ಲಿ ಬೆಳೆದ ಸಸ್ಯಗಳನ್ನು ಬಳಸಿ ಯೋಗ ಮ್ಯಾಟ್ ಸಿದ್ಧಪಡಿಸಲಾಗಿದೆ. ಇದು ಪರಿಸರ ಸ್ನೇಹಿ ಉತ್ಪನ್ನವಾಗಿದೆ.
ದೀಪರ್ ಬೀಲ್ ಕೆರೆಯಲ್ಲಿ ಬೆಳೆದ ಸಸ್ಯಗಳನ್ನು ಈ ಮೂಲಕ ಮರು ಬಳಕೆ ಮಾಡಿ ಪರಿಸರ ಸ್ನೇಹಿ ಉತ್ಪನ್ನ ಸಿದ್ದಪಡಿಸಲಾಗಿದೆ. ಮಿಥಾಲಿ ಮೈನು ಸೇರಿದಂತೆ ಆರು ಮಹಿಳೆಯರು ಈ ಸಾಹಸದಲ್ಲಿ ಕೈ ಜೋಡಿಸಿದ್ದಾರೆ.