newsics.com
ನವದೆಹಲಿ: ನೀವಿನ್ನು ನಿಮ್ಮ ವಾಚ್ ಮೂಲಕವೇ ಶಾಪಿಂಗ್ ಮಾಡಬಹುದು.
ಭಾರತದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಎಸ್‌ಬಿಐ ಹಾಗೂ ಗಡಿಯಾರ ನಿರ್ಮಾಣದ ದೈತ್ಯ ಕಂಪನಿ ಟೈಟಾನ್ ಜಂಟಿಯಾಗಿ ಸ್ಮಾರ್ಟ್ ಕೈಗಡಿಯಾರ ‘ಟೈಟಾನ್ ಪೇ’ ಮಾರುಕಟ್ಟೆಗೆ ಪರಿಚಯಿಸಿವೆ.
ಈ ಟೈಟಾನ್ ಪೇ ಮೂಲಕ ನೀವು ಯಾವುದೇ ಸಂಪರ್ಕವಿಲ್ಲದೆ ಸುರಕ್ಷಿತವಾಗಿ ಹಣ ಪಾವತಿಸಬಹುದು. ಟೈಟಾನ್ ಹಣ ಪಾವತಿಯನ್ನು ಬೆಂಬಲಿಸುವ 5 ಕೈಗಡಿಯಾರಗಳನ್ನು ಟೈಟಾನ್ ಬಿಡುಗಡೆ ಮಾಡಿದೆ. ಪುರುಷರಿಗಾಗಿ ಮೂರು ಮತ್ತು ಮಹಿಳೆಯರಿಗಾಗಿ ಎರಡು ಮಾದರಿಯ ವಾಚ್’ಗಳನ್ನು ಬಿಡುಗಡೆ ಮಾಡಲಾಗಿದೆ. ಟೈಟಾನ್ ಪೇ ಕೈಗಡಿಯಾರದ ಬೆಲೆ 2,995, ರಿಂದ 5,995 ರೂ. ನಿಗದಿಪಡಿಸಲಾಗಿದೆ.
ಹಣ ಪಾವತಿಗಾಗಿ ನೀವು PoS ಯಂತ್ರದ ಬಳಿ Titan Pay Powered Watch ಮೇಲೆ ಟ್ಯಾಪ್ ಮಾಡಬೇಕು. ಹೀಗೆ ಮಾಡುವುದರಿಂದ ನಿಮ್ಮ ಕಾಂಟಾಕ್ಟ್ ಲೆಸ್ ಹಣ ಪಾವತಿಯಾಗಲಿದೆ. ಸಾಮಾನ್ಯವಾಗಿ WiFi ಸೌಲಭ್ಯವಿರುವ ಡೆಬಿಟ್ ಕಾರ್ಡ್ ಮೂಲಕ ಹಣ ಪಾವತಿಯಾಗುವ ರೀತಿ ಇದರಲ್ಲಿಯೂ ಹಣ ಪಾವತಿಯಾಗಲಿದೆ. ಆದರೆ, ಎಸ್‌ಬಿಐ ಡೆಬಿಟ್ ಕಾರ್ಡ್ ಹೊಂದಿರುವವರು ಮಾತ್ರ ಟೈಟಾನ್ ಪೇ ಕೈಗಡಿಯಾರದ ಸೌಲಭ್ಯ ಪಡೆಯಬಹುದು. ನೀವು 2,000 ರೂಪಾಯಿಗಳವರೆಗಿನ ಪಾವತಿಯನ್ನು ಈ ಕೈಗಡಿಯಾರದ ಮೂಲಕ ಮಾಡಬಹುದು.
ಪುಲ್ವಾಮಾ ಮಾದರಿ ದಾಳಿಗೆ ಸಂಚು; 52 ಕೆಜಿ ಸ್ಫೋಟಕ ವಶ
ಹಿಂದು ಮಹಾಸಾಗರದಲ್ಲಿ ಪತ್ತೆಯಾಗಿದ್ದ ಚೀನಾ ನೌಕೆ; ಎಚ್ಚರಿಕೆ ಬಳಿಕ ವಾಪಸ್
ಜಾಗತಿಕ ಸ್ಮಾರ್ಟ್ ಸಿಟಿ; ಭಾರತಕ್ಕೆ ಭಾರೀ ಹಿನ್ನಡೆ, ಸಿಂಗಾಪುರ ಶೈನ್
ನಿಲ್ಲದ ಕೊರೋನಾ ಅಟ್ಟಹಾಸ; ಮತ್ತೆ 144 ಸೆಕ್ಷನ್ ಜಾರಿ
ಮಾರಕ ಕೊರೋನಾಕ್ಕೆ ರಾಜ್ಯಸಭಾ ಸದಸ್ಯ ಅಶೋಕ್ ಗಸ್ತಿ ಬಲಿ