newsics.com
ಮಹಾರಾಷ್ಟ್ರ: 8 ತರಗತಿ ಪಾಸ್ ಮಾಡಿದ್ದ ಮೆಕ್ಯಾನಿಕ್ ಒಬ್ಬ ಹೆಲಿಕಾಪ್ಟರ್ ಒಂದನ್ನು ಅಭಿವೃದ್ಧಿ ಪಡಿಸಿದ್ದು, ಅದರ ಪರೀಕ್ಷೆ ವೇಳೆ ಅಪಘಾತಕ್ಕೀಡಾಗಿದೆ. ಘಟನೆಯಲ್ಲಿ ಮೆಕ್ಯಾನಿಕ್ ಸಾವನ್ನಪ್ಪಿದ್ದಾನೆ.
ಮಹಾರಾಷ್ಟ್ರದ ಯಾವತ್ಮಲ್ನಲ್ಲಿ ಈ ಘಟನೆ ನಡೆದಿದೆ.
ಶೇಖ್ ಇಸ್ಮಾಯಿಲ್ ಇಬ್ರಾಹಿಂ( 24) ಮೃತ ಮೆಕ್ಯಾನಿಕ್.
ಈತ ಹೆಲಿಕಾಪ್ಟರ್ ಒಂದನ್ನು ತಯಾರಿಸಿ ಅದಕ್ಕೆ ‘ಮುನ್ನಾ ಹೆಲಿಕಾಪ್ಟರ್’ ಎಂದು ನಾಮಕರಣ ಮಾಡಿದ್ದ. ಹೆಲಿಕಾಪ್ಟರ್ ಅನ್ನು ಪರೀಕ್ಷಿಸುವ ವೇಳೆ ರೆಕ್ಕೆಯೆಂದು ಮುರಿದು ಆತನ ಮೇಲೆ ಬಿದ್ದು ಸಾವನ್ನಪ್ಪಿದ್ದಾನೆ.
ಎರಡು ವರ್ಷಗಳಿಂದ ಹೆಲಿಕಾಪ್ಟರ್ ತಯಾರಿಯಲ್ಲಿ ನಿರತನಾಗಿದ್ದ ಯುವಕ ಆಗಸ್ಟ್ 15ರಂದು ಈ ಹೆಲಿಕಾಪ್ಟರ್ ಲಾಂಚ್ ಮಾಡುವ ಉದ್ದೇಶ ಇಟ್ಟುಕೊಂಡಿದ್ದನು ಎಂದು ವರದಿಯಾಗಿದೆ.