newsics.com
ಹೈದರಾಬಾದ್: 16ನೇ ವಯಸ್ಸಿನಲ್ಲಿ ಸ್ನಾತಕೋತ್ತರ ಪದವಿ ಪಡೆಯುವ ಮೂಲಕ ಹೈದರಾಬಾದ್ ನ ವಿದ್ಯಾರ್ಥಿ ಹೊಸ ದಾಖಲೆ ಬರೆದಿದ್ದಾನೆ. ಭಾರತದ ಅತ್ಯಂತ ಕಿರಿಯ ಎಂ ಎ ಪದವೀಧರ ಎಂಬ ಖ್ಯಾತಿಗೆ ಪಾತ್ರನಾಗಿದ್ದಾನೆ.
ಅಗಸ್ತ್ಯ ಜೈಸ್ವಾಲ್ ಎಂಬ ವಿದ್ಯಾರ್ಥಿ ಈ ಸಾಧನೆ ಮಾಡಿದ್ದಾನೆ. ಉಸ್ಮಾನಿಯ ವಿಶ್ವವಿದ್ಯಾಲಯದಿಂದ ಸಾಮಾಜಿಕ ಶಾಸ್ತ್ರದಲ್ಲಿ ಎಂ ಎ ಪದವಿ ಪಡೆದಿದ್ದಾನೆ. ಈ ಹಿಂದೆ 2020ರಲ್ಲಿ ಜೈಸ್ವಾಲ್ ಪದವಿ ಪಡೆದಿದ್ದರು.
ಅಗಸ್ತ್ಯ ಜೈಸ್ವಾಲ್ ಸಾಧನೆಗೆ ಪ್ರಶಂಸೆಗಳ ಮಹಾಪೂರವೇ ಹರಿದು ಬಂದಿದೆ. ಪೋಷಕರು ಪುತ್ರನಿಗೆ ಸಿಹಿ ತಿನ್ನಿಸಿ ಸಂಭ್ರಮ ಹಂಚಿಕೊಂಡಿದ್ದಾರೆ