Monday, October 3, 2022

ಮದ್ಯದ ಅಮಲಿನಲ್ಲಿ ಪೊಲೀಸ್ ಜೀಪನ್ನೇ ಅಪಹರಿಸಿದ ಯುವಕ

Follow Us

Newsics.com

ಹೈದರಾಬಾದ್: ಇದು ಹೆಚ್ಚು ಕಡಿಮೆ ಸಿನೆಮಾದ ಕಥೆಯನ್ನು ಹೋಲುತ್ತಿದೆ. ಮದ್ಯದ ಅಮಲಿನಲ್ಲಿ ಯುವಕನೊಬ್ಬ ಪೊಲೀಸ್ ಜೀಪನ್ನೇ ಅಪಹರಿಸಿ ಪರಾರಿಯಾಗಿದ್ದಾನೆ,  ಇದು ನಡೆದದ್ದು ತೆಲಂಗಾಣದ  ನಲ್ಲೊಂಡಾ ಜಿಲ್ಲೆಯಲ್ಲಿ.

ನಲ್ಗೊಂಡಾದ ಮಿರಿಯಾಲ ಗುಡ ಗ್ರಾಮಾಂತರ ಪೊಲೀಸ್ ಠಾಣೆಯ  ಇನ್ಸ್ ಪೆಕ್ಟರ್ ಕರ್ತವ್ಯ ಮುಗಿಸಿ ಮನೆಗೆ ಮರಳುತ್ತಿದ್ದ ವೇಳೆ ರಸ್ತೆ ಬದಿ ನಾಲ್ವರು ಯುವಕರು ಗುಂಪುಸೇರಿ ಗದ್ದಲ್ಲ ಎಬ್ಬಿಸುತ್ತಿದ್ದರು. ಹತ್ತಿರ ಹೋಗಿ ವಿಚಾರಿಸಿದಾಗ ಅವರೆಲ್ಲ ಮದ್ಯಪಾನ ಮಾಡಿರುವುದು ಖಚಿತವಾಯಿತು. ರಸ್ತೆಯ ಇನ್ನೊಂದು ಬದಿಯಲ್ಲಿ ಜೀಪು ನಿಲ್ಲಿಸಿ ಅಲ್ಲಿಗೆ ತೆರಳಿದ ಇನ್ಸ್ ಪೆಕ್ಟರ್ ರಮೇಶ್ ಬಾಬು ಅವರನ್ನು ಗದರಿಸಿದರು. ಮನೆಗೆ ಹೋಗುವಂತೆ ಸೂಚಿಸಿದರು.

ಈ  ಸಂದರ್ಭದಲ್ಲಿ ಯುವಕರು ಮತ್ತು ಪೊಲೀಸ್ ಅಧಿಕಾರಿಯ ಮಧ್ಯೆ ಮಾತಿನ ಚಕಮಕಿ ಕೂಡ ನಡೆಯಿತು. ಇದು ನಡೆಯುತ್ತಿದ್ದಾಗಲೇ ಯುವಕರ ಗುಂಪಿನಲ್ಲಿದ್ದ ವಂಶಿ ಎಂಬ ಯುವಕ ಸೀದಾ ಹೋಗಿ ಪೊಲೀಸ್ ಜೀಪಿನ ಮುಂಭಾಗದಲ್ಲಿ ಕುಳಿತು ಕೊಂಡ. ಜೀಪ್ ಸ್ಟಾರ್ಟ್  ಮಾಡಿ ಅಲ್ಲಿಂದ ಎಸ್ಕೇಪ್ ಆದ.

ಕೊನೆಗೆ ಇನ್ನೊಂದು ವಾಹನದಲ್ಲಿ ಬೆನ್ನಟ್ಟಿ ಆತನನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ಆರೋಪಿ ವಂಶಿ ಹೈದರಾಬಾದ್ ನಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

20 ವರ್ಷ ಪಾಕ್ ಜೈಲಿನಲ್ಲಿ ಕಳೆದ ಬಳಿಕ ಸ್ವಗ್ರಾಮಕ್ಕೆ ಮರಳಿದ ಒಡಿಶಾದ ನಿವಾಸಿ

ಮತ್ತಷ್ಟು ಸುದ್ದಿಗಳು

vertical

Latest News

ಸೋನಿಯಾ ಗಾಂಧಿ ಮಡಿಕೇರಿ ಭೇಟಿ ರದ್ದು

newsics.com ಮೈಸೂರು: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ತಮ್ಮ ಕೊಡಗು ಪ್ರವಾಸ ರದ್ದುಪಡಿಸಿದ್ದಾರೆ. ಹವಾಮಾನ ವೈಫರೀತ್ಯದ ಪರಿಣಾಮ ಹೆಲಿಕಾಪ್ಟರ್ ನಲ್ಲಿ ತೆರಳಲು ಅಸಾಧ್ಯವಾದ ಕಾರಣ ಮಡಿಕೇರಿ...

ಹೆಚ್ ಎ ಎಲ್ ಸಿದ್ದಪಡಿಸಿದ ಹಗುರ ಯುದ್ಧ ಹೆಲಿಕಾಪ್ಟರ್ ಸೇನೆಗೆ ಸೇರ್ಪಡೆ

newsics.com ನವದೆಹಲಿ: ರಕ್ಷಣೆಯ ಸ್ವಾವಲಂಬನೆ ನಿಟ್ಟಿನಲ್ಲಿ ಭಾರತ ಮಹತ್ವದ ಮೈಲುಗಲ್ಲು ಸ್ಧಾಪಿಸಿದೆ.  ಆತ್ಮ ನಿರ್ಬರ್ ಭಾರತ ಯೋಜನೆಯ ಅಂಗವಾಗಿ  ದೇಶಿಯವಾಗಿ ಅಭಿವೃದ್ದಿಪಡಿಸಲಾಗಿರುವ ಹಗುರ ಯುದ್ಧ ಹೆಲಿಕಾಪ್ಟರ್ ಗಳನ್ನು ಸೇನೆಗೆ ಅರ್ಪಿಸಲಾಗಿದೆ. ಜೋಧ್ ಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ...

ಮಡಿಕೇರಿ ಭೇಟಿ ಮುಂದೂಡಿದ ಸೋನಿಯಾ ಗಾಂಧಿ

newsics.com ಮೈಸೂರು:  ಭಾರತ್ ಜೋಡೋ ಯಾತ್ರೆ  ಹಿನ್ನೆಲೆಯಲ್ಲಿ ರಾಜ್ಯಕ್ಕೆ ಆಗಮಿಸಿರುವ ಸೋನಿಯಾ ಗಾಂಧಿ ಹವಾಮಾನ ವೈಫರೀತ್ಯದಿಂದ ಮಡಿಕೇರಿ ಭೇಟಿ ಮುಂದೂಡಿದ್ದಾರೆ. ಹವಾಮಾನ ಪರಿಸ್ಥಿತಿ ಸುಧಾರಿಸಿದ ಬಳಿಕ ಅವರು ಮಡಿಕೇರಿಗೆ ತೆರಳಲಿದ್ದಾರೆ. ಮೂರು ದಿನಗಳ ಕಾಲ ಸೋನಿಯಾ...
- Advertisement -
error: Content is protected !!