newsics.com
ಮದ್ದೂರು: ಐಪಿಎಲ್ ಬೆಟ್ಟಿಂಗ್ ಹಃಣ ನೀಡುವ ಸಂಬಂಧ ಎರಡು ಗುಂಪುಗಳ ನಡುವೆ ಗಲಾಟೆಯಾಗಿದ್ದು ಹಣ ಗೆದ್ದ ಯುವಕನನ್ನು ಸೌದೆಯಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಬೊಆರಪುರ ಸಮೀಪ ಇರುವ ವಿ.ಸಿ.ನಾಲೆ ಬಳಿ ನಡೆದಿದೆ.
ಮದ್ದೂರು ತಾಲ್ಲೂಕಿನ ಚಿಕ್ಕರಸಿನಕೆರೆ ಗ್ರಾಮದ ಪುನೀತ್(28) ಬೆಟ್ಟಿಂಗ್ ಗೀಳಿಗೆ ಬಲಿಯಾದ ಯುವಕ. ಐಪಿಎಲ್ ಶುರುವಾದಾಗಿನಿಂದಲೂ ಪುನೀತ್ ಬೆಟ್ಟಿಂಗ್ನಲ್ಲಿ ತೊಡಗಿಸಿಕೊಂಡಿದ್ದು ಹಣ ಕಟ್ಟಿ ಗೆಲುವು ಕಂಡಿದ್ದರು.
ಪುನೀತ್ ತಾವು ಗೆದ್ದ ಹಣ ನೀಡುವಂತೆ ಬೋರಾಪುರದ ಶರತ್ ಹಅಗು ಮಂಜು ಬಳಿ ಕೇಳಿಕೊಂಡಿದ್ದಾರೆ. ಈ ವೇಳೆ ಯುವಕರ ಗುಂಪು ತಾವು ವಿ.ಸಿ.ನಾಲೆ ಬಳಿ ಇದ್ದು ಅಲ್ಲಿಗೆ ಬರುವಂತೆ ಪುನೀತ್ಗೆ ಸೂಚಿಸಿದ್ದಾರೆ. ಸ್ಥಳಕ್ಕೆ ತೆರಳಿದ ಪುನೀತ್ ತಮ್ಮ ಹಣ ನೀಡುವಂತೆ ಯುವಕರ ಗುಂಪಿಗೆ ಹೇಳಿದ್ದಾರೆ. ಈ ವಿಚಾರವಾಗಿ ಗಲಾಟೆಯಾಗಿ ಸೌದೆಯಿಂದ ಯುವಕರ ತಂಡ ಪುನೀತ್ ಮೇಲೆ ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ಮದ್ದೂರು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.