ನವದೆಹಲಿ: ಕೊರೋನಾ ಸೋಂಕಿತರ ಮೇಲೆ ಝೋಕೊವ್-ಡಿ ಎಂಬ ಔಷಧ ಪ್ರಯೋಗ ಆರಂಭಿಸಿರುವುದಾಗಿ ಝೈಡಸ್ ಕ್ಯಾಡಿಲಾ ಸಂಸ್ಥೆ ಘೋಷಿಸಿದೆ.
ಸೋಂಕಿತರ ಮೇಲಿನ ಮೊದಲ ಹಾಗೂ ಎರಡನೇ ಹಂತದ ಪ್ರಯೋಗ ನಡೆಸಲಾಗುತ್ತಿದ್ದು, ಶೀಘ್ರದಲ್ಲೇ ಔಷಧ ಯಶ ಸಾಧಿಸಲಿದೆ ಎಂದು ಸಂಸ್ಥೆ ತಿಳಿಸಿದೆ.
ಕೊರೋನಾ ಪೀಡಿತರ ಮೇಲೆ ಔಷಧ ಪ್ರಯೋಗದ ಅನುಮತಿ ಪಡೆದಿರುವ ಈ ಸಂಸ್ಥೆ, ವಿಶ್ವವನ್ನೇ ಬೆಚ್ಚಿ ಬೀಳಿಸಿರುವ ಮಹಾಮಾರಿಗೆ ಮದ್ದು ಕಂಡುಹಿಡಿಯುವ ವಿಶ್ವಾಸದಲ್ಲಿದೆ.
ಕೊರೋನಾ ಔಷಧದ ಮೊದಲ ಮತ್ತು ಎರಡನೇ ಹಂತದ ಪ್ರಯೋಗ ನಡೆಸಲಾಗುತ್ತಿದೆ. ಇದಕ್ಕಾಗಿ ದೇಶದಲ್ಲಿ 1,048 ಸ್ವಯಂ ಕಾರ್ಯಕರ್ತರ ಮೇಲೆ ಔಷಧ ಪ್ರಯೋಗ ನಡೆಸಲಾಗಿದೆ ಝೈಡಸ್ ಕ್ಯಾಡಿಲಾ ಸಂಸ್ಥೆ ತಿಳಿಸಿದೆ.
ಕ್ಲಿನಿಕಲ್ ಟ್ರಯಲ್’ನ ಅಂತಿಮ ಹಂತದಲ್ಲಿ ಆಕ್ಸ್ಫರ್ಡ್ ವಿವಿ ಲಸಿಕೆ