newsics.com
ನವದೆಹಲಿ:ನಿವೃತ್ತ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ (66) ಅವರಿಗೆ ದೇಶದೆಲ್ಲೆಡೆ ಸಂಚರಿಸಲು ಕೇಂದ್ರ ಸರ್ಕಾರ ಝಡ್ ಪ್ಲಸ್ ಭದ್ರತೆ ಒದಗಿಸಿದೆ.
ಈ ಕುರಿತು ಗೃಹ ಇಲಾಖೆ ಸಿ ಆರ್ ಪಿ ಎಫ್ ಗೆ ಸೂಚನೆ ನೀಡಿದೆ. ಇವರು ಐತಿಹಾಸಿಕ ರಾಮಮಂದಿರ ವಿವಾದದ ತೀರ್ಪು ನೀಡಿದ್ದರು. ಆ ಸಂದರ್ಭದಲ್ಲಿಯೂ ಅವರಿಗೆ z+ ಸೆಕ್ಯುರಿಟಿ ನೀಡಲಾಗಿತ್ತು.
ಗೊಗೊಯ್ ಅವರಿಗೆ 8-10 ಶಸ್ತ್ರಸಜ್ಜಿತ ಕಮಾಂಡೊಗಳು ಭದ್ರತೆ ನೀಡಲಿದ್ದಾರೆ. ಎಂಸಿಎಂ ಸರ್ವಿಸ್ ಪ್ರೈವೇಟ್ ಲಿಮಿಟೆಡ್ ಮತ್ತು ಇಥಾಲಿಯಾ ಥಾಯ್ ಡೆವಲಪ್ಮೆಂಟ್ ಪಬ್ಲಿಕ್ ಕಂಪನಿ ಲಿಮಿಟೆಡ್ ನಡುವಿನ ಪ್ರಕರಣದಲ್ಲಿ ಎರಡೂ ಪಾರ್ಟಿಗಳ ಒಪ್ಪಿಗೆ ಮೇರೆಗೆ ರಂಜನ್ ಗೊಗೊಯ್ ಅವರನ್ನು ಇತ್ತೀಚೆಗೆ ಏಕೈಕ ಮಧ್ಯಸ್ಥಿಕೆದಾರನನ್ನಾಗಿ ಸುಪ್ರೀಂಕೋರ್ಟ್ ನೇಮಿಸಿತ್ತು. ಇವರಿಗೆ ಜೀವ ಬೆದರಿಕೆ ಹಾಕಿರುವ ಆರೋಪಗಳು ಕೇಳಿಬಂದಿತ್ತು ಆದ್ದರಿಂದ ದೇಶದಲ್ಲಿ ಸಂಚರಿಸಲು ಭದ್ರತಾ ವ್ಯವಸ್ಥೆ ಮಾಡಲಾಗಿದೆ.