newsics.com
ಮುಂಬೈ: ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ದದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ 2 ರನ್ ಗಳಿಂದ ರೋಚಕ ಗೆಲುವು ಸಾಧಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ರಾಹುಲ್ ಪಡೆ ಯಾವುದೇ ವಿಕೆಟ್ ಕಳೆದುಕೊಳ್ಳದೆ 20 ಓವರ್ ಗಳಲ್ಲಿ 210 ರನ್ ಗಳ ಬೃಹತ್ ಮೊತ್ತ ಪೇರಿಸಿತು. ತಂಡದ ಪರ 70 ಎಸೆತಗಳಲ್ಲಿ 10 ಸಿಕ್ಸರ್ ಹಾಗೂ 10 ಬೌಂಡರಿ ಸಹಿತ 140 ರನ್ ಸ್ಕೋರ್ ಮಾಡಿದ ಕ್ವಿಂಟನ್ ಡಿ ಕಾಕ್, ಐಪಿಎಲ್ ಇತಿಹಾಸದಲ್ಲಿ ಹೊಸ ದಾಖಲೆಯನ್ನೇ ಸೃಷ್ಟಿಸಿದರು.
ಈ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಕೆಕೆಆರ್ ತಂಡವನ್ನು ಕಟ್ಟಿಹಾಕಲು ಲಕ್ನೋ ಬೌಲರ್ ಗಳು ಪರದಾಡಿದರು. ತಂಡ 20 ಓವರ್ ಅಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 208 ರನ್ ಗಳಿಸಿತ್ತು.
ಈ ಗೆಲುವಿನ ಮೂಲಕ ರಾಹುಲ್ ಪಡೆ ಪ್ಲೇ ಆಫ್ ಗೆ ಪ್ರವೇಶ ಪಡೆದುಕೊಂಡರೆ, ಕಲ್ಕತ್ತ ತಂಡದ ಪ್ಲೇ ಆಫ್ ಕನಸ್ಸು ಚೂರಾಗಿದೆ.