Saturday, June 10, 2023

ಮೆಟಾದಿಂದ ಕೆಲಸ ಕಳೆದುಕೊಂಡ ಉನ್ನತ ಹುದ್ದೆಯಲ್ಲಿದ್ದ ಭಾರತೀಯರು

Follow Us

newsics.com

ನ್ಯೂಯಾರ್ಕ್‌: ಫೇಸ್‌ಬುಕ್‌ನ ಮಾತೃ ಸಂಸ್ಥೆ ಮೆಟಾ ತಾನು ಈ ಹಿಂದೆ ಘೋಷಿಸಿದ 10,000 ಉದ್ಯೋಗ ಕಡಿತ ಯೋಜನೆಯ ಅಂತಿಮ ಭಾಗವಾಗಿ ಹಲವು ಮಂದಿಯನ್ನು ಕೆಲಸದಿಂದ ವಜಾ ಮಾಡಿದೆ.

ಈ ಬಾರಿ ಪ್ರಮುಖ ಸ್ಥಾನದಲ್ಲಿರುವ ಭಾರತೀಯರು ಕೆಲಸ ಕಳೆದುಕೊಂಡಿದ್ದಾರೆ. ಭಾರತ ಮಾರ್ಕೆಟಿಂಗ್ ನಿರ್ದೇಶಕ ಅವಿನಾಶ್ ಪಂತ್‌, ಮಾಧ್ಯಮ ಸಹಯೋಗದ ನಿರ್ದೇಶಕ ಹಾಗೂ ಮುಖ್ಯಸ್ಥ ಸಾಕೇತ್ ಝಾ ಸೌರಭ್ ಮುಂತಾದವರು ಕೆಲಸ ಕಳೆದುಕೊಂಡಿದ್ದಾರೆ.

ಮಾರ್ಕೆಟಿಂಗ್, ಸೈಟ್ ಸೆಕ್ಯೂರಿಟಿ, ಎಂಟರ್‌ಪೈಸ್‌ ಎಂಜಿನಿಯರಿಂಗ್‌, ಪ್ರೋಗ್ರಾಂ ಮ್ಯಾನೇಜ್‌ಮೆಂಟ್, ಕಂಟೆಂಟ್‌ ಸ್ಟ್ರಾಟರ್ಜಿ ಹಾಗೂ ಕಾರ್ಪೊರೇಟ್ ಕಮ್ಯೂನಿಕೇಷನ್ ವಿಭಾಗದ ಹಲವು ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ.

2023ರ ಅದಿಯಲ್ಲಿ ಉದ್ಯೋಗ ಕಡಿತ ಘೋಷಣೆ ಮಾಡಿದ ಮೊದಲ ಕಂಪನಿಯಾಗಿತ್ತು ಮೆಟಾ. ಈ ಹಿಂದೆ 11,000 ಉದ್ಯೋಗ ಕಡಿತ ಮಾಡಿದ್ದ ಮೆಟಾ, ಬಳಿಕ 10,000 ಮಂದಿಯನ್ನು ಕೆಲಸದಿಂದ ವಜಾ ಮಾಡುವುದಾಗಿ ಹೇಳಿತ್ತು.

ಸತತ ಉದ್ಯೋಗ ಕಡಿತದ ಹೊರತಾಗಿಯೂ, ಕೆಳದೊಂದು ವರ್ಷದಲ್ಲಿ ಮೆಟಾದ ಷೇರು ಮೌಲ್ಯ ದುಪ್ಪಟ್ಟಾಗಿದೆ. ವೆಚ್ಚ ಕಡಿತ ಕ್ರಮ ಹಾಗೂ ಕೃತಕಬುದ್ಧಿ ಮತ್ತೆಯಿಂದಾಗಿ ಕಂಪನಿಯ ಮೌಲ್ಯ ಹೆಚ್ಚಾಗಿದೆ.

ಇಷ್ಟು ದಿನ ಹೊಸ ಸಂಸತ್ ಭವನವಾಯ್ತು, ಈಗ ‘ಸೆಂಗೋಲ್’ ಮೇಲೆ ಕೆಸರೆರಚಾಟ: ಯಾಕಿಷ್ಟು ರಾಜಕೀಯ?

ಮತ್ತಷ್ಟು ಸುದ್ದಿಗಳು

vertical

Latest News

ಬ್ರಿಟನ್: ಸಂಸದ ಸ್ಥಾನಕ್ಕೆ ಬೋರಿಸ್ ಜಾನ್ಸನ್ ರಾಜೀನಾಮೆ!

Newsics.com ಲಂಡನ್: ಬ್ರಿಟನ್ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಇದೀಗ ಸಂಸದ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ.

ಗಡಿಯಲ್ಲಿ ಪಾಕ್ ನಿಗೂಢ ಬಲೂನ್ ಪತ್ತೆ: ಸೇನೆಯಿಂದ ಶೋಧ ಕಾರ್ಯ

Newsics.com ಶ್ರೀನಗರ: ಪಾಕಿಸ್ತಾನದ ಅಂತರಾಷ್ಟ್ರೀಯ ಏರ್‌ಲೈನ್ಸ್ ಲಾಂಛನ ಇರುವ ವಿಮಾನದ ಆಕಾರದ ಅನುಮಾನಾಸ್ಪದ ಬಲೂನ್ ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಶನಿವಾರ ಪತ್ತೆಯಾಗಿದೆ.

ಗ್ಯಾರಂಟಿ ಜಾರಿ ಬೆನ್ನಲ್ಲೇ ಮದ್ಯಪ್ರಿಯರಿಗೆ ಶಾಕ್

newsics.com ಬೆಂಗಳೂರು: ರಾಜ್ಯ ಸರ್ಕಾರ ಗ್ಯಾರಂಟಿ ಜಾರಿಗೊಳಿಸಿದ ಬೆನ್ನಲ್ಲೇ ಮದ್ಯದ ಬೆಲೆಯನ್ನು ದುಪ್ಪಟ್ಟು ಮಾಡಿ ಮದ್ಯಪ್ರಿಯರಿಗೆ ಶಾಕ್ ನೀಡಿದೆ. ಕರೆಂಟ್ ಬಿಲ್ ದರ ಏರಿಕೆ ಬಳಿಕ...
- Advertisement -
error: Content is protected !!