ಬಳ್ಳಾರಿ: ರಾಜ್ಯಮಟ್ಟದ ಅಂಗವಿಕಲರ ಈಜು ಸ್ಪರ್ಧೆಯಲ್ಲಿ ಜಿಲ್ಲೆಯ ಅಂಧ ಹಾಗೂ ಅಂಗವಿಕಲ ಈಜುಪಟುಗಳು 37 ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ದೈಹಿಕ ಅಂಗವೈಕಲ್ಯ, ಅಂಧ ಹಾಗೂ ಬುದ್ಧಿಮಾಂದ್ಯ ವಿಭಾಗದಲ್ಲಿ 13 ಸ್ಪರ್ಧಿಗಳು ಪಾಲ್ಗೊಂಡಿದ್ದು, 37 ಪದಕ ಗೆದ್ದಿದ್ದಾರೆ. ಈ ಪೈಕಿ 29 ಚಿನ್ನ, ತಲಾ ನಾಲ್ಕು ಬೆಳ್ಳಿ ಹಾಗೂ ಕಂಚಿನ ಪದಕಗಳಾಗಿವೆ. ಅಂಧರ ವಿಭಾಗದಲ್ಲಿ ಪ್ರಫುಲ್, ವಿಶ್ವನಾಥ, ರಮ್ಯ ತಲಾ ಮೂರು ಚಿನ್ನ ಹಾಗೂ ಮಹಾಂತೇಶ ತಲಾ ಒಂದು ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕ ಪಡೆದಿದ್ದಾರೆ.
ಬೆಂಗಳೂರಿನ ನಾಗರಬಾವಿಯ ಕೆಎಲ್‌ಇ ಈಜುಕೊಳದಲ್ಲಿ ಈ ಸ್ಪರ್ಧೆ ನಡೆಯಿತು.
ಅಂಧ, ಅಂಗವಿಕಲರ ಈಜು ಸ್ಪರ್ಧೆ; 37 ಪದಕ ಬಳ್ಳಾರಿ ಪಾಲು
Follow Us