ಬೆಂಗಳೂರು: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ ಯು ಆರ್ ಅನಂತಮೂರ್ತಿ ಅವರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ಘಟಕ ಕೂಡ ಅವರ ನೆನಪು ಮಾಡಿಕೊಂಡಿದೆ. ಟ್ವಿಟರ್ ನಲ್ಲಿ ಸಂದೇಶ ಪ್ರಕಟಿಸಿರುವ ಕಾಂಗ್ರಸ್, ಅನಂತಮೂರ್ತಿ ಅವರ ಸಾಹಿತ್ಯ ಕೊಡುಗೆಯ ಬಗ್ಗೆ ಪ್ರಸ್ತಾಪಿಸಿದೆ. ಸಾಹಿತಿಗಳ ಬಗ್ಗೆ ಕಾಂಗ್ರೆಸ್ ಅಪರೂಪಕ್ಕೆ ಟ್ವಿಟರ್ ನಲ್ಲಿ ಪ್ರಸ್ತಾಪಮಾಡುತ್ತಿದೆ.