ಶಿವಮೊಗ್ಗ: ಮಗು ಅಪಹರಿಸಲು ಯತ್ನಿಸಿದವನಿಗೆ ಆ ಮಗುವಿನ ತಾಯಿಯೇ ತಕ್ಕ ಪಾಠ ಕಲಿಸಿದ್ದಾರೆ.
ತೀರ್ಥಹಳ್ಳಿ ಹೊರವಲಯದ ಮೇಲಿನಕುರುವಳ್ಳಿಯಲ್ಲಿ ಈ ಘಟನೆ ನಡೆದಿದೆ. ಮನೆಯಲ್ಲಿ ತಾಯಿ ಕೃಷ್ಣವೇಣಿ ಅಡುಗೆ ಮಾಡುತ್ತಿದ್ದಾಗ ನಾಲ್ಕು ವರ್ಷದ ಹೆಣ್ಣುಮಗು ಹಾಲ್ನಲ್ಲಿ ಆಟವಾಡುತ್ತಿತ್ತು. ಈ ವೇಳೆ ಅಪರಿಚಿತನೊಬ್ಬ ಆ ಮಗು ಅಪಹರಿಲು ಯತ್ನಿಸಿದ್ದಾನೆ. ಆಗ ಹಾಲ್ನಿಂದ ಮಗು ಕೂಗುವುದನ್ನು ಕೇಳಿ ತಾಯಿ ಓಡಿ ಬಂದಿದ್ದು, ಆತ ಮಗುವನ್ನು ಎತ್ತಿಕೊಂಡು ಓಡುತ್ತಿದ್ದ. ತಡೆಯಲು ಯತ್ನಿಸಿದ ಕೃಷ್ಣವೇಣಿ ಅವರನ್ನು ದೂಡಿದ. ಕೂಡಲೇ ಅಡುಗೆ ಮನೆಯಲ್ಲಿದ್ದ ಈಳಿಗೆ ಮಣೆಯಿಂದ ಅಪಹರಣಕಾರನ ಕೈಗೆ ಹೊಡೆದಿದ್ದಾರೆ. ಇದರಿಂದ ನೋವಾಗಿ ಮಗುವನ್ನು ಬಿಟ್ಟು ಪರಾರಿಯಾಗಿದ್ದಾನೆ.
ಅಪಹರಣಕಾರನಿಂದ ಮಗು ಬಿಡಿಸಿಕೊಂಡ ತಾಯಿ!
Follow Us