ಹಾಸನ: ಸಕಲೇಶಪುರ ತಾಲೂಕಿನ ಚಂಗಡಿಹಳ್ಳಿ ಗ್ರಾಮದಲ್ಲಿ ಕಳಪೆ ಗುಣಮಟ್ಟದ ರಸಗೊಬ್ಬರ ಸಾಗಾಟ ಮಾಡುತ್ತಿದ್ದವರ ವಿರುದ್ಧ ಮಾತನಾಡಿದ ಮಹಿಳೆಯರ ಮೇಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ.
ರಸಗೊಬ್ಬರದ ಕಳ್ಳ ವ್ಯವಹಾರಕ್ಕೆ ಅಡ್ಡಗಾಲಾದ ಮಹಿಳೆಯರನ್ನು ಅಧ್ಯಕ್ಷ ನಾಗೇಶ್, ರಸ್ತೆಯಲ್ಲಿ ಬಹಿರಂಗವಾಗಿ ಅವಹೇಳನ ಮಾಡಿದ್ದಾರೆ. ಈ ಗ್ರಾಮದ ಮಹಿಳೆಯರು ಲಾರಿಯಲ್ಲಿ ಸಾಗಿಸುತ್ತಿದ್ದ ಕಳಪೆ ಗುಣಮಟ್ಟದ ರಸಗೊಬ್ಬರನ್ನು ತಡೆದಿದ್ದರು.