ಧರ್ಮಸ್ಥಳ: ರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರ ಧರ್ಮಸ್ಥಳದಲ್ಲಿ ಐದು ದಿನಗಳ ಲಕ್ಷದೀಪೋತ್ಸವ ಶುಕ್ರವಾರ ಆರಂಭವಾಗಲಿದೆ.
ಈ ಹಿನ್ನೆಲೆಯಲ್ಲಿ ವಸ್ತುಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಸುಮಾರು 80 ವರ್ಷಗಳ ಹಿಂದೆ ದಿ. ಮಂಜಯ್ಯ ಹೆಗ್ಗಡೆಯವರು ಕ್ಷೇತ್ರದ ಆಡಳಿತ ವಹಿಸಿಕೊಂಡ ಬಳಿಕ ಕ್ಷೇತ್ರದಲ್ಲಿ ಆರಂಭಗೊಂಡ ಲಕ್ಷ ದೀಪೋತ್ಸವ ಇಂದು ಸಂಪೂರ್ಣ ಬದಲಾಗಿದೆ. ಜನ-ಜಾತ್ರೆಗೆ ಲಕ್ಷ ದೀಪೋತ್ಸವ ಸೀಮಿತವಾಗದೆ, ಕ್ಷೇತ್ರಕ್ಕೆ ಬರುವ ಭಕ್ತರಿಗೆ ಹಲವು ವಿಚಾರಗಳ ಕುರಿತು ಮಾಹಿತಿ, ಮನರಂಜನೆ ನೀಡುವ ಉತ್ಸವವಾಗಿದೆ.
