ಬೆಂಗಳೂರು: ಮಾರ್ಚ್ 5ರಂದು ಮಂಡನೆಯಾಗಲಿರುವ ರಾಜ್ಯ ಮುಂಗಡ ಪತ್ರಕ್ಕೆ ಸಿದ್ದತೆ ನಡೆದಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಇಂದು ವಿವಿಧ ಇಲಾಖಾ ಮುಖ್ಯಸ್ಥರ ಜೊತೆ ಚರ್ಚೆ ನಡೆಸಲಿದ್ದಾರೆ. ಮುಖ್ಯವಾಗಿ ವಾಣಿಜ್ಯ. ಅಬಕಾರಿ ಮತ್ತು ಸಾರಿಗೆ ಇಲಾಖೆ ಮುಖ್ಯಸ್ಥರ ಜೊತೆ ಚರ್ಚೆ ನಡೆಸಲಿದ್ದಾರೆ. ಭೀಕರ ಪ್ರವಾಹ ರಾಜ್ಯದ ಆರ್ಥಿಕತೆ ಮೇಲೆ ಪ್ರತಿಕೂಲ ಪರಿಣಾಮ ಬೀರಿದ್ದು, ಸಂಪನ್ಮೂಲ ಕ್ರೋಢಿಕರಣ ಪ್ರಮುಖ ಸವಲಾಗಿದೆ.