ಬೆಂಗಳೂರು: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಗೆ ರಾಗಿಮುದ್ದಿ ನಾಟಿಕೋಳಿ ಸಾರು ಎಂದರೆ ಪ್ರಿಯ. ಜೊತೆಗೆ,
ಬೆಂಗಳೂರಿನ ಮಸಾಲೆ ದೋಸೆಯೂ ಕೂಡ ಅವರಿಗೆ ಇಷ್ಟವಂತೆ.
ರಾಜಭವನದ ನ್ಯಾಕ್ ರಜತೋತ್ಸವ ಕಾರ್ಯಕ್ರಮದಲ್ಲಿ ಈ ರುಚಿಯ ಬಗ್ಗೆ ಸ್ವತಃ ಉಪರಾಷ್ಟ್ರಪತಿಗಳೇ ಹಾಡಿ ಹೊಗಳಿದ್ದಾರೆ.
ತಾವು ಬೆಂಗಳೂರಿಗೆ ಬಂದಾಗಲೆಲ್ಲ ಜನಾರ್ದನ ಹೊಟೇಲ್ಗೆ ತಿಂಡಿ ತಿನ್ನಲು ಹೋಗುತ್ತೇನೆ. ಇಂದು ಸಹ ಅಲ್ಲಿ
ತಿಂಡಿ ರಾಜಭವದಲ್ಲಿ ತಮಗಾಗಿ ತರಿಸಲಾಗಿದ್ದ ಮಸಾಲೆ ದೋಸೆಯನ್ನು ಸವಿದಿದ್ದೇನೆ. ಆಹಾರದಲ್ಲಿ ಎಷ್ಟೊಂದು ವೈವಿಧ್ಯತೆಗಳಿವೆ.
ರಾಗಿಮುದ್ದೆ ನಾಟಿಕೋಳಿ ಸಾರು ಒಳ್ಳೆಯ ಕಾಂಬಿನೇಷನ್. ಮಕ್ಕಳು ಫಿಜ್ಜಾ ಬರ್ಗರ್ ತಿನ್ನುವು ದು ಬೇಡ ರಾಗಿಮುದ್ದೆ ತಿನ್ನಬೇಕು ಎಂದು ಸಲಹೆ ನೀಡಿದ್ದಾರೆ.
ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡುಗೆ ರಾಗಿಮುದ್ದೆ ಇಷ್ಟ
Follow Us