ಬೆಂಗಳೂರು: ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಬೆಳಗ್ಗೆ 9 ಗಂಟೆಯ ವೇಳೆಗೆ ಬಿಜೆಪಿ 10, ಕಾಂಗ್ರೆಸ್ 2 ಹಾಗೂ ಜೆಡಿಎಸ್ 2 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.
ಈಗಾಗಲೇ ಕೆಲ ಕ್ಷೇತ್ರಗಳಲ್ಲಿ ಮೂರು ಸುತ್ತಿನ ಮತ ಎಣಿಕೆ ನಡೆದಿದೆ. ಮಹಾಲಕ್ಷ್ಮೀ ಲೇಔಟ್ ನಲ್ಲಿ ಬಿಜೆಪಿ ಗೋಪಾಲಯ್ಯ, ಕೆ.ಆರ್.ಪುರದಲ್ಲಿ ಭೈರತಿ ಬಸವರಾಜು, ವಿಜಯನಗರದಲ್ಲಿ ಆನಂದ್ ಸಿಂಗ್, ಗೋಕಾಕದಲ್ಲಿ ರಮೇಶ್ ಜಾರಕಿಹೊಳಿ, ಅಥಣಿಯಲ್ಲಿ ಮಹೇಶ್ ಕುಮಟಳ್ಲೀ, ಕಾಗವಾಡದಲ್ಲಿ ಶ್ರೀಮಂತ್ ಪಾಟೀಲ್, ಹಿರೇಕೇರೂರಿನಲ್ಲಿ ಬಿ.ಸಿ.ಪಾಟೀಲ್, ರಾಣೆಬೆನ್ನೂರಿನಲ್ಲಿ ಅರುಣ್ ಕುಮಾರ್ ಪೂಜಾರ, ಯಲ್ಲಾಪುರದಲ್ಲಿ ಶಿವರಾಮ್ ಹೆಬ್ಬಾರ್ , ಚಿಕ್ಕಬಳ್ಳಾಪುರಲದಲ್ಲಿ ಡಾ.ಸುಧಾಕರ್ ಮುನ್ನಡೆ ಸಾಧಿಸಿದ್ದಾರೆ.
ಶಿವಾಜಿನಗರದಲ್ಲಿ ಕಾಂಗ್ರೆಸ್ ನ ರಿಜ್ವಾದ್ ಅರ್ಷದ್, ಹುಣಸೂರಿನಲ್ಲಿ ಎಸ್.ಪಿ.ಮಂಜುನಾಥ್ ಮುನ್ನಡೆಯಲ್ಲಿದ್ದಾರೆ. ಯಶವಂತಪುರದಲ್ಲಿ ಜೆಡಿಎಸ್ ನ ಜವರಾಯಿಗೌಡ, ಕೆ.ಆರ್.ಪೇಟೆಯಲ್ಲಿ ದೇವರಾಜ್ ಮುನ್ನಡೆ ಸಾಧಿಸಿದ್ದಾರೆ. ಹೊಸಕೋಟೆಯ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ 1,700 ಮತಗಳಿಂದ ಮುಂದಿದ್ದಾರೆ.