ಬೆಂಗಳೂರು: ರಾಜ್ಯದ 15 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಶೇ 67.90% ರಷ್ಟು ಮತದಾನ ದಾಖಲಾಗಿದೆ. ಹೊಸಕೋಟೆಯಲ್ಲಿ ಅತಿ ಹೆಚ್ಚು ಹಾಗೂ ಕೆ.ಆರ್.ಪುರಂನಲ್ಲಿ ಅತಿ ಕಡಿಮೆ ಮತಚಲಾವಣೆಯಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.
ಹೊಸಕೋಟೆ ಕ್ಷೇತ್ರದಲ್ಲಿ ಅತಿ ಹೆಚ್ಚು ಶೇ 90.90,ಅಥಣಿ ಕ್ಷೇತ್ರದಲ್ಲಿ ಶೇ 73.37, ಕಾಗವಾಡ ಕ್ಷೇತ್ರದಲ್ಲಿ ಶೇ.76.24, ಗೋಕಾಕ್ ಕ್ಷೇತ್ರದಲ್ಲಿ ಶೇ. 73.03, ಯಲ್ಲಾಪುರ ಕ್ಷೇತ್ರದಲ್ಲಿ ಶೇ.77.53, ಹಿರೆಕೆರೂರು ಕ್ಷೇತ್ರದಲ್ಲಿ ಶೇ 79.03,
ರಾಣೆ ಬೆನ್ನೂರು ಕ್ಷೇತ್ರದಲ್ಲಿ ಶೇ 73.93, ವಿಜಯ ನಗರ ಕ್ಷೇತ್ರದಲ್ಲಿ ಶೇ. 65.02,
ಚಿಕ್ಕಬಳ್ಳಾಪುರದಲ್ಲಿ ಶೇ. 86.84, ಯಶವಂತಪುರದಲ್ಲಿ ಶೇ. 59.10,
ಮಹಾಲಕ್ಷ್ಮೀ ಔಟ್ ನಲ್ಲಿ ಶೇ. 51.21, ಶಿವಾಜಿ ನಗರ ಕ್ಷೇತ್ರದಲ್ಲಿ ಶೇ. 48.05,
ಕೆ.ಆರ್.ಪೇಟೆಯಲ್ಲಿ ಶೇ. 80.52, ಹುಣಸೂರು ಕ್ಷೇತ್ರದಲ್ಲಿ ಶೇ. 80.59, ಕೆ.ಆರ್ ಪುರಂನಲ್ಲಿ ಶೇ 46.74 ರಷ್ಟು ಮತದಾನ ದಾಖಲಾಗಿದೆ.
ಉಪ ಚುನಾವಣೆ; ಹೊಸಕೋಟೆ ಹೆಚ್ಚು, ಕೆ.ಆರ್.ಪುರಂ ಕಡಿಮೆ ಮತದಾನ
Follow Us