Tuesday, December 6, 2022

ಉಪ ಮುಖ್ಯಮಂತ್ರಿ ಪಟ್ಟಕ್ಕೆ ಪಟ್ಟು: ದೆಹಲಿಯಲ್ಲೇ ಠಿಕಾಣಿ ಹೂಡಿರುವ ಶ್ರೀರಾಮುಲು

Follow Us

ನವದೆಹಲಿ: ರಾಜ್ಯದಲ್ಲಿ ಉಪ ಮುಖ್ಯಮಂತ್ರಿ ಪದವಿ ಅಗತ್ಯ ಇಲ್ಲ ಎಂದು ಬಿಜೆಪಿಯ ಒಂದು ಬಣ ವಾದಿಸುತ್ತಿರುವಾಗಲೇ, ಆರೋಗ್ಯ ಸಚಿವ  ಶ್ರೀರಾಮುಲು ತಮ್ಮ ಪ್ರಯತ್ನವನ್ನು  ಇನ್ನಷ್ಟು ತೀವ್ರಗೊಳಿಸಿದ್ದಾರೆ. ಕಳೆದ ಎರಡು ದಿನಗಳಿಂದ ದೆಹಲಿಯಲ್ಲಿ ಬೀಡು ಬಿಟ್ಟಿರುವ ಶ್ರೀರಾಮುಲು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭೇಟಿಗೆ ಪ್ರಯತ್ನಿಸುತ್ತಿದ್ದಾರೆ. ಬಿಜೆಪಿ ಹೈ ಕಮಾಂಡ್ ಮುಂದೆ ಹಕ್ಕು ಮಂಡನೆ  ಶ್ರೀರಾಮುಲು ಅವರ ಕಾರ್ಯತಂತ್ರವಾಗಿದೆ. ಚುನಾವಣೆ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ನೇಮಕ ಸಂಬಧ ಭರವಸೆ ನೀಡಲಾಗಿತ್ತು. ಇದು ನನಗಲ್ಲ. ಸಮುದಾಯಕ್ಕೆ ನೀಡಿದ್ದ ಭರವಸೆಯಾಗಿತ್ತು. ಈ ಹಿನ್ನೆಲೆಯಲ್ಲಿ ಈ ಮಾತನ್ನು ಉಳಿಸಿಕೊಡಿ ಎಂದು ಶ್ರೀರಾಮುಲು ಮನವಿ ಮಾಡುವ ಸಾಧ್ಯತೆಗಳಿವೆ

ಮತ್ತಷ್ಟು ಸುದ್ದಿಗಳು

vertical

Latest News

20ಕ್ಕೂ ಹೆಚ್ಚು ಬಾರಿ ಕಲ್ಲು ಎತ್ತಿಹಾಕಿ ವ್ಯಕ್ತಿಯ ಹತ್ಯೆ

newsics.com ಬೆಂಗಳೂರು: ರಾಜಧಾನಿ ಬೆಂಗಳೂರಿನ ಕೆ. ಪಿ. ಅಗ್ರಹಾರದಲ್ಲಿ ಹತ್ಯೆಗೀಡಾದ ಯುವಕನ ಗುರುತು ಪತ್ತೆ ಹಚ್ಚಲಾಗಿದೆ. ಮೃತಪಟ್ಟ ವ್ಯಕ್ತಿಯನ್ನು  ಬಾಳಪ್ಪ ಜಮಖಂಡಿ ಎಂದು ಗುರುತಿಸಲಾಗಿದೆ. ಕಲ್ಲು ಎತ್ತಿ...

ಬಂಗಾಳ ಕೊಲ್ಲಿಯಲ್ಲಿ ವಾಯು ಭಾರ ಕುಸಿತ: ರಾಜ್ಯದಲ್ಲಿ ನಾಲ್ಕು ದಿನ ಮಳೆ

newsics.com ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ವಾಯು ಭಾರ ಕುಸಿತ ಸಂಭವಿಸಿದ್ದು ಚಂಡ ಮಾರುತ ರೂಪುಗೊಳ್ಳುತ್ತಿದೆ. ಇದರ ಪರಿಣಾಮ ರಾಜ್ಯದಲ್ಲಿ ನಾಳೆಯಿಂದ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ನಾಲ್ಕು ದಿನ ಮಳೆ...

ಬೈಕ್ ಗೆ ಸಾರಿಗೆ ಬಸ್ ಡಿಕ್ಕಿ: ಮೂವರ ಸಾವು, ಓರ್ವನಿಗೆ ಗಾಯ

newsics.com ರಾಯಚೂರು: ರಾಜ್ಯದ ರಾಯಚೂರು ತಾಲೂಕಿನಲ್ಲಿ ಭೀಕರ ಅಪಘಾತ ಸಂಭವಿಸಿದೆ. ಸಾರಿಗೆ ಬಸ್ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಮೃತಪಟ್ಟಿದ್ದು, ಓರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ. ಮಸ್ಕಿ ಸಮೀಪದ ಗುಡದೂರು ಬಳಿ ಈ ಅಪಘಾತ...
- Advertisement -
error: Content is protected !!