ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರದ 2018ನೇ ಸಾಲಿನ ಹಿರಿಯ ಸಾಹಿತಿ ಡಾ. ಎಂ.ಎಂ. ಕಲಬುರಗಿ ಮಾನವಿಕ ಅಧ್ಯಯನ ಪ್ರಶಸ್ತಿಗೆ ಸಂಶೋಧಕ ಡಾ. ಎಂ. ಚಿದಾನಂದ ಮೂರ್ತಿ ಅವರನ್ನು ಆಯ್ಕೆ ಮಾಡಲಾಗಿದೆ.
ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಎಂ.ಎನ್. ನಂದೀಶ್ ಹಂಚೆ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ಡಾ. ಚಿಮೂ ಅವರಿಗೆ 75 ಸಾವಿರ ರೂ ನಗದು ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು. ಅಭಿನವ ಪ್ರಕಾಶನಕ್ಕೆ ಅತ್ಯುತ್ತಮ ಪ್ರಕಾಶನ ಪ್ರಶಸ್ತಿ ದೊರೆತಿದ್ದು, ಒಂದು ಲಕ್ಷ ರೂ ನಗದು ಬಹುಮಾನ ಒಳಗೊಂಡಿದೆ ಎಂದರು.
ಡಾ. ಜಿ.ಪಿ. ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿಗೆ ಕಾರ್ಕಳದ ಪ್ರೊ. ಎಂ. ರಾಮಚಂದ್ರ, ಡಾ|| ಅನುಪಮಾ ನಿರಂಜನ ವೈದ್ಯಕೀಯ ಹಾಗೂ ವಿಜ್ಞಾನ ಸಾಹಿತ್ಯ ಪ್ರಶಸ್ತಿಗೆ ಡಾ|| ವಿಜಯಲಕ್ಷ್ಮಿ ಬಾಳೇಕುಂದ್ರಿ, ಪುಸ್ತಕ ಸೊಗಸು ಹಾಗೂ ಮುದ್ರಣ ಸೊಗಸು ವಿಭಾಗದ ಮೊದಲನೇ ಬಹುಮಾನಕ್ಕೆ ಬಿ. ಜಯರಾಮ ಅವರ ಸಮಕಾಲೀನ ದೃಶ್ಯಕಲೆಯ ಸಾಕ್ಷಿ ಪ್ರಜ್ಞೆ ಪುಸ್ತಕ, ಎರಡನೇ ಬಹುಮಾನಕ್ಕೆ ಬಳ್ಳಾರಿಯ ಪಲ್ಲವ ಪ್ರಕಾಶನದ ಕಾಡುಜೇಡ ಮತ್ತು ಬಾತುಕೋಳಿ ಹೂ, ಮೂರನೇ ಬಹುಮಾನಕ್ಕೆ ಯಾಜಿ ಪ್ರಕಾಶನದ ‘ ಜಾಡಮಾಲಿಯ ಜೀವಕೇಳುವುದಿಲ್ಲ’ ಕೃತಿಗೆ ಆಯ್ಕೆಯಾಗಿದೆ.
ಎಂ.ಎಂ. ಕಲಬುರಗಿ ಪ್ರಶಸ್ತಿಗೆ ಚಿದಾನಂದಮೂರ್ತಿ ಆಯ್ಕೆ
Follow Us