
ಬೆಂಗಳೂರು: ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯು ಮಾರ್ಚ್/ಏಪ್ರಿಲ್ -2020 ರ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಹಾಜರಾಗುವ ಅರ್ಹ ಶಾಲಾ ವಿದ್ಯಾರ್ಥಿಗಳು, ಖಾಸಗಿ ಮತ್ತು ಪುನರಾವರ್ತಿತ ಅಭ್ಯರ್ಥಿಗಳ ನೋಂದಣಿಯನ್ನು ಭೌತಿಕವಾಗಿ ಮಂಡಳಿಗೆ ಸಲ್ಲಿಸಲು ಮತ್ತು ನೆಫ್ಟ್ ಮೂಲಕ ಬ್ಯಾಂಕ್‍ಗೆ ಪರೀಕ್ಷಾ ಶುಲ್ಕ ಜಮೆ ಮಾಡಲು ನಿಗದಿಪಡಿಸಿದ್ದ ದಿನಾಂಕವನ್ನು ವಿಸ್ತರಿಸಿದೆ.
ವಿದ್ಯಾರ್ಥಿಗಳ ಪರೀಕಾ ಶುಲ್ಕವನ್ನು 100 ರೂ. ದಂಡ ಶುಲ್ಕದೊಂದಿಗೆ ಈ ಹಿಂದಿನ ಸಾಲಿನಂತ ಭೌತಿಕವಾಗಿ ನೆಫ್ಟ್ ಚಲನ್ ಮೂಲಕ ಬ್ಯಾಂಕ್‍ಗೆ ಪಾವತಿಸಲು ಈ ತಿಂಗಳ 30 ರವರೆಗೆ ಕಾಲಾವಕಾಶ ನೀಡಲಾಗಿದೆ. ವಿದ್ಯಾರ್ಥಿಗಳ ಮಾಹಿತಿಯ ಅನುಬಂಧ ಮತ್ತು ಬ್ಯಾಂಕ್ ಚಲನ್‍ನೊಂದಿಗೆ ಭೌತಿಕವಾಗಿ ಮಂಡಳಿಗೆ ಸಲ್ಲಿಸಲು ಡಿಸೆಂಬರ್ 2ರ ಒಳಗೆ ಸಲ್ಲಿಸಬೇಕು.