ಬೆಂಗಳೂರು: ನಾನು ಯಾರನ್ನು ಎಂದೂ ದ್ವೇಷ ಮಾಡಲು ಪ್ರಯತ್ನಿಸಲಿಲ್ಲ. ಆದರೂ ಸಾರ್ವಜನಿಕ ಜೀವನದಲ್ಲಿ ಯಾರಿಗಾದರೂ ನನ್ನಿಂದ ತೊಂದರೆಯಾಗಿದ್ದರೆ ಅವರ ಕ್ಷಮೆಯಾಚಿಸುತ್ತೇನೆ. ಎಲ್ಲವನ್ನೂ ಮರೆತುಬಿಡಿ. ಪರಸ್ಪರ ನಿಂದನೆಯನ್ನು ಸದ್ಯಕ್ಕೆ ಹಿಂದೆ ಹಾಕಿ ಮುನ್ನಡೆಯೋಣ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಹಿರಿಯ ಮುಖಂಡ ಎಸ್.ಎಂ ಕೃಷ್ಣ ಮನವಿ ಮಾಡಿದ್ದಾರೆ.
ತಮ್ಮ ಸಾರ್ಥಕ ಸಂಸದೀಯ ನೆನಪುಗಳನ್ನು ಒಳಗೊಂಡ “ಕೃಷ್ಣಪಥ ಸೇರಿ ಸಾಧನೆ-ಸಿದ್ದಿಗಳ ಪರಿಚಯ, ಆಕರ ಗ್ರಂಥಗಳ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಈಗ ಪ್ರಜಾಪ್ರಭುತ್ವ ಹಣಬಲದ ಮೇಲೆ ನಿಂತಿದೆ. ಒಳ್ಳೆಯ ದಿನಗಳನ್ನು ನೋಡಿ ಬಾಳ ಮುಸ್ಸಂಜೆಯಲ್ಲಿರುವ ನಮ್ಮಂತಹವರಿಗೆ ಇದು ಕಳವಳ ಮೂಡಿಸುತ್ತಿದೆ. ಎಲ್ಲಿಯವರೆಗೆ ಹಣದ ಪ್ರಭಾವ ಇರುತ್ತದೊ ಅಲ್ಲಿಯವರಗೆ ಒಳ್ಳೆಯ ರಾಜಕಾರಣ ಸಾಧ್ಯವಿಲ್ಲ ಎಂದರು.
ಎಸ್.ಎಂ.ಕೃಷ್ಣ ಅವರ ಸಂಸದೀಯ ನೆನಪುಗಳನ್ನೊಳಗೊಂಡ ಪುಸ್ತಕ ಬಿಡುಗಡೆ
Follow Us