ಬೆಂಗಳೂರು: ರಾಜ್ಯದ ಆಯ್ದ ಎ ಶ್ರೇಣಿಯ ದೇವಸ್ಥಾನಗಳಲ್ಲಿ ಪ್ರತಿವರ್ಷ ಸರ್ಕಾರ ಸಾಮೂಹಿಕ ವಿವಾಹ ನಡೆಸಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಶುಕ್ರವಾರ ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ‘ಸಪ್ತಪದಿ’ ಸಾಮೂಹಿಕ ವಿವಾಹ ಲಾಂಛನ ಹಾಗೂ ಕರಪತ್ರ ಬಿಡುಗಡೆ ಮಾಡಿದ ಅವರು, ಇದಕ್ಕಾಗಿ ಎಲ್ಲ ಜಿಲ್ಲೆಗಳ ಆಯ್ದ ಎ ಶ್ರೇಣಿಯ ದೇಗುಲಗಳನ್ನು ಆಯ್ಕೆ ಮಾಡಲಾಗುವುದು. ಪ್ರತಿ ಜೋಡಿ ಸಾಮೂಹಿಕ ವಿವಾಹಕ್ಕೆ ತಗಲುವ 55,000 ರೂ. ವೆಚ್ಚವನ್ನು ದೇಗುಲಗಳ ನಿಧಿಯಿಂದಲೇ ಭರಿಸಲಾಗುವುದು ಎಂದರು.
ಎ ಶ್ರೇಣಿ ದೇಗುಲಗಳಲ್ಲಿ ಸಾಮೂಹಿಕ ವಿವಾಹ- ಸಿಎಂ
Follow Us