ಬೆಂಗಳೂರು:
ಬಹುಕೋಟಿ ವಂಚನೆಯ ಐಎಂಎ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಶುಕ್ರವಾರ ಹಲವು ಐಪಿಎಸ್ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿದೆ.
ಐಪಿಎಸ್ ಅಧಿಕಾರಿಗಳಾದ ಹೇಮಂತ್ ನಿಂಬಾಳ್ಕರ್, ಅಜಯ್ ಹಿಲೊರಿ, ಶ್ರೀಧರ್ ಸೇರಿ ಹಲವು ಅಧಿಕಾರಿಗಳ ಮನೆ, ತೋಟದ ಮನೆ, ಕಚೇರಿಗಳೂ ಸೇರಿದಂತೆ ರಾಜ್ಯದ 14 ಕಡೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಈ ದಾಳಿಯಿಂದಾಗಿ ಐಎಂಎ ಪ್ರಕರಣದಲ್ಲಿ ಹಲವು ಐಪಿಎಸ್ ಅಧಿಕಾರಿಗಳು ಷಾಮೀಲಾಗಿರುವುದು ದೃಢಪಟ್ಟಂತಾಗಿದೆ.
ಐಎಂಎ ಕೇಸ್: ಐಪಿಎಸ್ ಅಧಿಕಾರಿಗಳ ಮನೆ ಮೇಲೆ ಸಿಬಿಐ ದಾಳಿ
Follow Us