ಮಂಗಳೂರು: ರಾಜ್ಯ ಮುಜರಾಯಿ ಇಲಾಖೆಯಿಂದ ಏಲಂ ಗೆ ಒಳಗಾಗಿರುವ ಕಟೀಲು ಮೇಳ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಉಸ್ತುವಾರಿಯಲ್ಲಿ ಮುನ್ನಡೆಯಲಿದೆ.
ಖಾಸಗಿ ವ್ಯಕಿಗಳು ಇದರ ನಿರ್ವಹಣೆಯನ್ನು ಮಾಡುವುದು ಸರಿಯಲ್ಲ ಎಂಬ ಆದೇಶವನ್ನು ಮುಜರಾಯ ಇಲಾಖೆಯ ಆಯುಕ್ತರು ನೀಡಿದ್ದಾರೆ.
ಮುಜರಾಯಿ ಇಲಾಖೆ ಆಯುಕ್ತರ ಈ ಆದೇಶ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದ ಭಕ್ತಾದಿಗಳು, ಯಕ್ಷಗಾನ ಸೇವಾರ್ಥಿಗಳು ಹಾಗೂ ಕಲಾಭಿಮಾನಿಗಳಿಗೆ ಹರ್ಷ ತಂದಿದೆ. ಈ ಆದೇಶದಿಂದ ಹತ್ತಾರು ವರ್ಷಗಳಿಂದ ಯಕ್ಷಗಾನ ಬುಕ್ಕಿಂಗ್ ಮಾಡಿ ತಮ್ಮ ಸರದಿಗಾಗಿ ಕಾಯುತ್ತಿರುವವರು ನಿಟ್ಟುಸಿರುಬಿಡುವಂತಾಗಿದೆ.