ಮಂಗಳೂರು: ಕಟೀಲು ಮೇಳದಿಂದ ಪ್ರಸಿದ್ಧ ಭಾಗವತರಾದ ಪಟ್ಲ ಸತೀಶ ಶೆಟ್ಟಿ ಅವರನ್ನು ಹೊರಹಾಕಲಾಗಿದೆ.
ಏಲಂ ಕ್ರಮದ ಬಳಿಕ ಶುಕ್ರವಾರ ರಾತ್ರಿ ಕಟೀಲು ದುರ್ಗಾಪರಮೇಶ್ವರಿ ದೇಗುಲ ಆವರಣದಲ್ಲಿ ನಡೆದ ಮೊದಲ ಸೇವೆಯಾಟದಲ್ಲಿ ಭಾಗವತಿಕೆ ಮಾಡುತ್ತಿದ್ದ ಸತೀಶ್ ಶೆಟ್ಟಿ ಅವರನ್ನು ಅವಮಾನಿಸುವ ರೀತಿಯಲ್ಲಿ ಭಾಗವತ ಸ್ಥಾನದಿಂದ ಎಬ್ಬಿಸಿ ಮೇಳದ ವ್ಯವಸ್ಥಾಪಕ ಕಲ್ಲಾಡಿ ದೇವಿ ಪ್ರಸಾದ್ ಶೆಟ್ಟಿ ಮತ್ತಿತರರು ಸೇರಿ ಹೊರಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.
ಏಲಂ ವಿಚಾರದಲ್ಲಿ ಪಟ್ಲ ಸತೀಶ ಶೆಟ್ಟಿ ಕಲಾವಿದರ ಪರ ಇದ್ದಾರೆಂಬ ಕಾರಣಕ್ಕೆ ಅವರನ್ನು ಮೇಳದಿಂದ ಹೊರಹಾಕಲಾಗಿದೆ ಎಂಬ ಅಂಶ ಚರ್ಚೆಗೊಳಗಾಗಿದೆ. ಸತೀಶ್ ಶೆಟ್ಟಿ ಅವರನ್ನು ಮೇಳದಿಂದ ಹೊರಹಾಕಿದ್ದಕ್ಕೆ ಅಸ್ರಣ್ಣ ಕುಟುಂಬಸ್ಥರು ಹಾಗೂ ಮೇಳದ ಆಡಳಿತ ವರ್ಗದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಈ ಬಗ್ಗೆ ಚರ್ಚಿಸಲು ಸತೀಶ್ ಶೆಟ್ಟಿ ಅವರಿಂದ ಸ್ಥಾಪಿತವಾದ ಯಕ್ಷಧ್ರುವ ಫೌಂಡೇಷನ್‍ನಿಂದ ಪದಾಧಿಕಾರಿಗಳ ತುರ್ತು ಸಭೆ ಕರೆಯಲಾಗಿದೆ.
ಕಟೀಲು ಮೇಳದಿಂದ ಭಾಗವತ ಪಟ್ಲ ಸತೀಶ್ ಶೆಟ್ಟಿ ಹೊರಕ್ಕೆ
Follow Us