Friday, January 22, 2021

ಕನ್ನಡಿಗರೇ ಪರಾಂಬರಿಸಿಕೊಳ್ಳಿ…

” ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ”  ಕುವೆಂಪು ನಾಡಗೀತೆಯಲ್ಲಿ ಭಾರತ ಹಾಗೂ ಕರ್ನಾಟಕಕ್ಕೂ ತಾಯಿ ಮಗಳ ಬಂಧವನ್ನು   ಸುಂದರವಾಗಿ ಬೆಸೆದಿದ್ದಾರೆ…  ಅವಿಚ್ಛಿನ್ನ ಸಂಪ್ರದಾಯ, ಅಭೇಧ್ಯ ಸಂಸ್ಕೃತಿಯುಳ್ಳ ಭಾರತದ ಒಂದು ಭಾಗವಾದ ಹೆಮ್ಮೆಯ ಕರ್ನಾಟಕದ ಭಾಷೆ ಕನ್ನಡ… ದ್ರಾವಿಡಭಾಷೆಗಳಲ್ಲಿ ಪ್ರಾಮುಖ್ಯತೆ ಹೊಂದಿರುವ , ಭಾರತದ ಪುರಾತನ ಭಾಷೆಗಳಲ್ಲಿ ಒಂದಾಗಿರುವ ಕನ್ನಡ ನಮ್ಮ ಮಾತೃಭಾಷೆ ಎಂದು, ಗರ್ವದಿಂದ ಎದೆತಟ್ಟಿ ಹೇಳಬೇಕು.. ಆದರೆ ನಾವು  ಮಾಡುತ್ತಿರುವುದಾದರೂ ಏನು!?
       ಬೇರೆ ಭಾಷೆಯ ಜನರೊಡನೆ ಕನ್ನಡದಲ್ಲಿ ವ್ಯವಹರಿಸಿದರೆ , ಅವಮಾನ ಎಂಬ ಮನಸ್ಥಿತಿಯಲ್ಲಿದ್ದೇವೆ..ಕರ್ನಾಟಕದಲ್ಲಿ ವಾಸಿಸುವ, ಇಲ್ಲಿನ ಗಾಳಿ, ನೀರು ಸೇವಿಸುವ , ಅನ್ನ ತಿನ್ನುವ ಪ್ರತಿಯೊಬ್ಬನೂ ಕನ್ನಡ ಕಲಿಯಬೇಕೆಂಬ ಅನಿವಾರ್ಯ ಪರಿಸ್ಥಿತಿಯನ್ನು ನಾವು ಸೃಷ್ಟಿಸಬೇಕಿತ್ತು.. ಬದಲಿಗೆ ನಮ್ಮ ಭಾಷೆಯನ್ನೇ ಬಲಿ ಕೊಟ್ಟು, ನಾವೂ ಪರಭಾಷಾ ವ್ಯಾಮೋಹಕ್ಕೊಳಗಾಗಿ ಅವರ ಭಾಷೆಯನ್ನು ನಾವು ಕಲಿತು ಅದರಲ್ಲೇ ಸಂವಹನ ನಡೆಸುತ್ತಿದ್ದೇವೆ..ಇದು ನಾಚಿಗೇಡು ಸಂಗತಿ ಅನ್ನದೇ ಮತ್ತೇನೆನ್ನಲಿ!?? 
           ಹಲವಾರು ಐಟಿ-ಬಿಟಿ ಕಂಪನಿಗಳು ಕೈಗಾರಿಕಾ ಸ್ಥಾವರಗಳು, ಕಾರ್ಖಾನೆಗಳು ಕರ್ನಾಟಕದಲ್ಲಿ ತಲೆಯೆತ್ತಿದ್ದ ರಿಂದ ವಲಸಿಗರ ಸಂಖ್ಯೆ ಗಣನೀಯವಾಗಿ ಏರಿಕೆ ಆಗುತ್ತಲೇ ಇದೆ.. ಕೆಲಸಕ್ಕಾಗಿ , ತಮ್ಮ ಜೀವನವನ್ನು ಕಟ್ಟಿಕೊಳ್ಳಲು ಬಂದವರೇ ಜಾಸ್ತಿ ..ಉತ್ತರ ಭಾರತದ, ಮಹಾರಾಷ್ಟ್ರ, ಕೇರಳ ಸುತ್ತಮುತ್ತಲಿನ ರಾಜ್ಯದ ಜನಗಳ ಜೊತೆ ಅವರ ಭಾಷೆಯನ್ನೂ  ಕನ್ನಡಿಗರು ಆದರಣೀಯವಾಗಿ ಸ್ವಾಗತಿಸಿದಂತಿದೆ…ಆದ್ದರಿಂದಲೇ ಕರ್ನಾಟಕ ಬಹುಭಾಷಾ ರಾಜ್ಯವಾಗಿ ಉಳಿದುಬಿಟ್ಟಿದೆ.. ಕನ್ನಡ ಭಾಷೆಗೆ  ಒತ್ತು ಕೊಡಬೇಕೆಂದು  ಹೋರಾಟ ನಡೆಸಿದ್ದು , ನಮ್ಮವರಿಂದಲೇ ಮಣ್ಣು ಪಾಲಾದದ್ದು ಖೇದಕರ ಸಂಗತಿ…ಹೊರಗಿಂದ ಬಂದ ಪರಭಾಷಾ ಜನಗಳು ಕನ್ನಡದಲ್ಲಿ ಸಂವಹನ ನಡೆಸದಿದ್ದರೂ ಇಲ್ಲಿ ಅವರ ಭಾಷೆಯ ಪ್ರಾಬಲ್ಯದಿಂದಲೇ ಬದುಕಬಹುದೆಂದು ಚೆನ್ನಾಗಿ ಮನಗಂಡಂತಿದೆ.. ಹತ್ತು ವರುಷಗಳಾದರೂ ಇಪ್ಪತ್ತು ವರ್ಷ ಕಳೆದರೂ ಕರ್ನಾಟಕದ ನೆಲದಲ್ಲಿ ಗಟ್ಟಿಯಾಗಿ ನೆಲೆಯೂರಿದವರೂ, ಕನ್ನಡ ಕಲಿಯುವ ಉಮೇದಿಗಿನ್ನೂ ಇಳಿದಂತಿಲ್ಲ…
                  ನವೆಂಬರ್ ಒಂದರ ಕನ್ನಡಿಗರೇ ದಯವಿಟ್ಟು  ಪರಾಂಬರಿಸಿಕೊಳ್ಳಿ..ನಾವೆಷ್ಟು ಕನ್ನಡಿಗರಾಗಿದ್ದೇವೆಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಿ..ಕನ್ನಡ ರಾಜಕಾರಣಿಗಳಿಗೆ  ಮತ ಕಬಳಿಸುವ ಅಸ್ತ್ರವಾದರೆ, ಕೆಲ  ಹೋರಾಟಗಾರರಿಗೆ ಪ್ರಚಾರದ ಸರಕಾಗಿದೆ..ತಾಯಿ ತಾಯ್ನೆಲ ಸ್ವರ್ಗಕ್ಕಿಂತಲೂ ಮಿಗಿಲೆಂದು ನಂಬಿದ ಸಂಸ್ಕೃತಿ ನಮ್ಮದು..ತಾಯಿ ಭಾಷೆಯನ್ನು ಕಡೆಗಣಿಸದೆ ಮುಂದಿನ ಪೀಳಿಗೆಗೆ ಭಾಷಾಭಿಮಾನ ಕಲಿಸುವುದು ಪ್ರತಿಯೊಬ್ಬ ಕನ್ನಡಿಗನ ಆದ್ಯ ಕರ್ತವ್ಯ… ಭಾಷಾಭಿಮಾನ ಎದೆಯಲ್ಲಿರಲಿ ಕೃತಿಯಲ್ಲಿರಲಿ…ಜೈ ಭುವನೇಶ್ವರಿ…

– ಅರ್ಚನಾ ಎಚ್

ಮತ್ತಷ್ಟು ಸುದ್ದಿಗಳು

Latest News

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾಗಿ ಡಾ. ದೊಡ್ಡರಂಗೇಗೌಡ ಆಯ್ಕೆ

newsics.com ಹಾವೇರಿ: ಫೆಬ್ರವರಿ 26, 27 ಮತ್ತು 28 ರಂದು ಹಾವೇರಿಯಲ್ಲಿ ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಸಾಹಿತಿ, ಪದ್ಮಶ್ರೀ...

ರಾಜ್ಯದಲ್ಲಿ ಈವರೆಗೆ 1.38ಲಕ್ಷ ಮಂದಿಗೆ ಲಸಿಕೆ ಹಂಚಿಕೆ – ಆರೋಗ್ಯ ಸಚಿವ

newsics.com ಬೆಂಗಳೂರು; ರಾಜ್ಯದಲ್ಲಿ ಲಸಿಕೆ ಹಂಚಿಕೆ ಮುಂದುವರೆದಿದ್ದು, ಒಟ್ಟು 1,38,656 ಜನರಿಗೆ ನೀಡಲಾಗಿದೆ. ಈ ಪೈಕಿ ಶೇ.2ರಿಂದ 3.5 ಜನರಿಗೆ ಮಾತ್ರ ಅಡ್ಡಪರಿಣಾಮವಾಗಿದೆ. ಯಾರೂ ಮರಣಹೊಂದಿಲ್ಲ. ಇಂದು 1,46240 ಡೋಸ್ ಕೋವಾಕ್ಸಿನ್ ಬರಲಿದೆ ಎಂದು...

ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್’ಗೆ ಝಡ್ ಪ್ಲಸ್ ಭದ್ರತೆ

newsics.com ನವದೆಹಲಿ:ನಿವೃತ್ತ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ (66) ಅವರಿಗೆ ದೇಶದೆಲ್ಲೆಡೆ ಸಂಚರಿಸಲು ಕೇಂದ್ರ ಸರ್ಕಾರ ಝಡ್ ಪ್ಲಸ್ ಭದ್ರತೆ ಒದಗಿಸಿದೆ. ಈ ಕುರಿತು ಗೃಹ ಇಲಾಖೆ ಸಿ ಆರ್ ಪಿ ಎಫ್...
- Advertisement -
error: Content is protected !!