ಬೆಂಗಳೂರು: ರಾಜ್ಯದಲ್ಲಿ ರಾಜಕಾರಣಿಗಳ ಹನಿಟ್ರ್ಯಾಪ್ ಪ್ರಕರಣ ಭಾರೀ ಸದ್ದು ಮಾಡುತ್ತಿರುವಾಗಲೇ ಬೆಳಗಾವಿಯ ಅನರ್ಹ ಶಾಸಕರೊಬ್ಬರ ಹನಿಟ್ರ್ಯಾಪ್ ಪ್ರಕರಣ ಬೆಳಕಿಗೆ ಬಂದಿದೆ.
ಬೆಳಗಾವಿಯ ಅನರ್ಹ ಶಾಸಕ ಕರಾವಳಿಯ ಹುಡುಗಿಯೊಂದಿಗೆ ಅಶ್ಲೀಲ ಸಂಭಾಷಣೆ ನಡೆಸಿದ್ದು, ಹುಡುಗಿಗೆ ಖಾಸಗಿಯಾಗಿ ಭೇಟಿಯಾಗುವಂತೆ ಹಾಗೂ ಬೆತ್ತಲೆ ಫೋಟೊ ಕಳುಹಿಸುವಂತೆ ತಿಳಿಸಿರುವ ಸಂಭಾಷಣೆ ಫೇಸ್ಬುಕ್ ನಲ್ಲಿ ಬಯಲಾಗಿದೆ. ಇದಕ್ಕೆ ಪ್ರತಿಯಾಗಿ ಫ್ಲ್ಯಾಟ್ ಕೊಡಿಸುವಂತೆ ಹುಡುಗಿ ಬೇಡಿಕೆ ಇಟ್ಟಿದ್ದಾಳೆ. ಉಪಚುನಾವಣೆಯ ನಂತರ ಈ ಬೇಡಿಕೆ ಈಡೇರಿಸುವುದಾಗಿ ಅನರ್ಹ ಶಾಸಕ ಭರವಸೆ ನೀಡಿದ್ದಾರೆ.
ಕರಾವಳಿ ಹುಡುಗಿ ಜತೆ ಬೆಳಗಾವಿ ಅನರ್ಹ ಶಾಸಕ ಅಶ್ಲೀಲ ಸಂಭಾಷಣೆ!
Follow Us