ಬೆಂಗಳೂರು; ಕರ್ನಾಟಕ ರಾಜ್ಯದ ಕಳಸಾ –ಬಂಡೂರಿ ಯೋಜನೆಗೆ ಅನುಮತಿ ನೀಡಿದ್ದ ಪತ್ರವನ್ನು ಪರಿಸರ ಮತ್ತು ಅರಣ್ಯ ಸಚಿವಾಲಯ ತಡೆಹಿಡಿದಿದೆ. ಈ ಕುರಿತ ಪತ್ರ ಸಂವಾದದ ಪ್ರತಿಯನ್ನು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. “ಕರ್ನಾಟಕದ ಕಳಸಾ ಬಂಡೂರು ಕುಡಿಯುವ ನೀರು ಪೂರೈಕೆ ಯೋಜನೆಗೆ ಅನುಮತಿ ನೀಡಿ ಪರಿಸರ, ಅರಣ್ಯ ಸಚಿವಾಲಯ 2019ರ ಅಕ್ಟೋಬರ್ 17ರಂದು ನೀಡಿದ್ದ ಪತ್ರವನ್ನು ತಡೆಹಿಡಿದಿರುವುದಾಗಿ ಮಾಹಿತಿ ನೀಡಿದೆ” ಎಂದಿದ್ದಾರೆ.
ಕಳಸಾ ಬಂಡೂರಿ; ರಾಜ್ಯಕ್ಕೆ ನೀಡಿದ್ದ ಅನುಮತಿಗೆ ತಡೆ
Follow Us