ಬೆಂಗಳೂರು: ಆನೆಕಲ್ ತಾಲ್ಲೂಕಿನ ಹಳೆ ಚಂದಾಪುರ ಬಳಿ ಎರಡು ಕಾಡೆಮ್ಮೆಗಳು ನಗರಕ್ಕೆ ಬಂದು ಸ್ವಚ್ಛಂದವಾಗಿ ವಿಹರಿಸಿವೆ. ಆಹಾರ ಹುಡುಕುತ್ತಾ ನಾಡಿನತ್ತ ದೌಡಾಯಿಸಿದ ಕಾಡೆಮ್ಮೆಗಳು ಮತ್ತೆ ಕಾಡಿಗೆ ಹೋಗಲು ದಿಕ್ಕು ಕಾಣದೇ ಇಲ್ಲಿನ ಸನ್ ಪ್ಯಾಲೇಸ್ ಕಲ್ಯಾಣ ಮಂಟಪ ಹಿಂಭಾಗಲ್ಲಿ ಸಂಚರಿಸುತ್ತಿದ್ದವು.
ಆದರೆ ಗಿಜಿಗುಡುವ ಜನ ಜಂಗುಳಿಯನ್ನು ನೋಡಿದರೂ ಕಾಡೆಮ್ಮೆಗಳು ಯಾವುದೇ ಆತಂಕಕ್ಕೆ ಒಳಗಾಗಲಿಲ್ಲ. ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಕಾಡೆಮ್ಮೆಗಳನ್ನು ರಕ್ಷಿಸಿ ಕಾಡಿಗೆ ಬಿಟ್ಟರು.