ಉಡುಪಿ: ಮೈಸೂರಿನಿಂದ ಹೊರಟಿದ್ದ ಪ್ರವಾಸಿ ಬಸ್ಸೊಂದು ಕಾರ್ಕಳದ ಎಸ್.ಕೆ ಬಾರ್ಡರ್ ನ ಮಾಳ ಗ್ರಾಮದ ಬಳಿ ಬಂಡೆಗಲ್ಲಿಗೆ ಬಡಿದು ಚಾಲಕ ಸೇರಿ 9 ಮಂದಿ ಅಸುನೀಗಿದ್ದಾರೆ.
ಮೈಸೂರಿನ ಕೈಗಾರಿಕಾ ಪ್ರದೇಶ ಬೆಳವಾಡಿಯಲ್ಲಿರುವ ಜರ್ಮನಿ ಮೂಲದ ಸೆಂಚುರಿ ವೈಟಲ್ ಕಾರ್ಡ್ ಕಂಪನಿ ಯ 35 ಸಿಬ್ಬಂದಿ ಈ ಟೂರಿಸ್ಟ್ ಬಸ್ ನಲ್ಲಿದ್ದರು. ಉಡುಪಿ-ಚಿಕ್ಕಮಗಳೂರು ಘಾಟಿ ರಸ್ತೆಯಲ್ಲಿ ಈ ದುರಂತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಬಂಡೆಗೆ ಬಡಿದಿದೆ. ಫೆ.14 ರಂದು ಮೈಸೂರಿನಿಂದ ಇವರೆಲ್ಲ ಪ್ರವಾಸ ಹೊರಟಿದ್ದರು.
ಕಾರ್ಕಳ ಬಳಿ ಬಸ್ ಅಪಘಾತ: ಮೈಸೂರಿನ 9 ಪ್ರವಾಸಿಗರ ಸಾವು
Follow Us