ಬೆಂಗಳೂರು:ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಸಂಚಿತ ವೇತನ ಶ್ರೇಣಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರಿಗೆ ಐದು ಮತ್ತು ಆರನೇ ವೇತನ ಶ್ರೇಣಿ ವಿಸ್ತರಣೆಗೆ ಹೈಕೋರ್ಟ್ ನಿರಾಕರಿಸಿದೆ.
ಕರ್ನಾಟಕ ಹಿಂದೂ ಧಾರ್ಮಿಕ ದತ್ತಿ ಮತ್ತು ಧರ್ಮಾದಾಯ ಕಾಯ್ದೆ-1997ರ ಮತ್ತು ನಿಯಮಗಳ ಅಡಿಯಲ್ಲಿ ಐದನೇ ಮತ್ತು ಆರನೇ ವೇತನ ಶ್ರೇಣಿಯನ್ನು ಅರ್ಜಿದಾರರಿಗೆ ವಿಸ್ತರಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿರುವ ನ್ಯಾಯಪೀಠ, ಈ ಕುರಿತಂತೆ ಸುಮತಿ ಹಾಗೂ 30 ಕ್ಕೂ ಹೆಚ್ಚು ಕನ್ಸಾಲಿಡೇಟೆಡ್ ವೇತನದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದೆ.