ಕೊಪ್ಪಳ: ಜಿಲ್ಲಾಧಿಕಾರಿ ಸುನಿಲ್ ಕುಮಾರ್ ಅವರ ಬಗ್ಗೆ ಫೇಸ್ ಬುಕ್ ನಲ್ಲಿ ಅವಹೇಳನಕಾರಿ ವಿಡಿಯೋ ಹರಿಬಿಟ್ಟ ಅಂಜನಾದ್ರಿ ಬೆಟ್ಟದ ಅರ್ಚಕರನ್ನು ಪೊಲೀಸರು ಬಂಧಿಸಿದ್ದಾರೆ.
ವಿದ್ಯಾದಾಸ್ ಬಾಬಾ ಬಂಧಿತ ಅರ್ಚಕ. ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ ಬಾಬಾನನ್ನು ಇದೀಗ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಕೊಪ್ಪಳ ಜಿಲ್ಲೆಯ ಡಿಸಿ ಸುನೀಲ್ ಕುಮಾರ್ ರನ್ನು ಗೂಂಡಾ ಎಂದು ಬಾಬಾ ಅಗೌರವ ತೋರಿದ್ದರು.
ಕೊಪ್ಪಳ ಡಿಸಿ ನಿಂದಿಸಿದ್ದ ಅರ್ಚಕ ಬಾಬಾ ಬಂಧನ
Follow Us