ಮೈಸೂರು: ಪ್ರೀತಿಯ ಕೋತಿಯ ಅಂತ್ಯಸಂಸ್ಕಾರ ಹಿನ್ನೆಲೆಯಲ್ಲಿ ಮಾಜಿ ಸಚಿವ ಸಾ.ರಾ. ಮಹೇಶ್ ವಿದೇಶಿ ಪ್ರವಾಸ ಮೊಟಕುಗೊಳಿಸಿ ಹಿಂದಿರುಗಿದ್ದಾರೆ.
ಕೆ.ಆರ್. ನಗರ ತಾಲೂಕು ಸಾಲಿಗ್ರಾಮದ ತೋಟದ ಮನೆಯಲ್ಲಿ ಇದ್ದ ಚಿಂಟು ಹೆಸರಿನ ಕೋತಿಯ ಅಂತ್ಯಸಂಸ್ಕಾರಕ್ಕೆ ಅವರು ವಿದೇಶದಿಂದ ಮರಳಿದ್ದಾರೆ.
ಈ ಕೋತಿ ಮೂರು ವರ್ಷಗಳ ಹಿಂದೆ ಸಾ.ರಾ.ಮಹೇಶ್ ಅವರ ತೋಟದ ಮನೆ ಸೇರಿಕೊಂಡಿತ್ತು. ಸಾಲಿಗ್ರಾಮಕ್ಕೆ ಬಂದಾಗಲೆಲ್ಲ ತಪ್ಪದೆ ತೋಟದ ಮನೆಗೆ ತೆರಳಿ ಚಿಂಟು ಜತೆ ಕಾಲ ಕಳೆಯುತ್ತಿದ್ದರು.
ಕೋತಿ ಅಂತ್ಯಸಂಸ್ಕಾರಕ್ಕೆ ವಿದೇಶದಿಂದ ಮರಳಿದ ಮಾಜಿ ಸಚಿವ
Follow Us