ಬೆಂಗಳೂರು: ದೇಶದ ಸಂಪೂರ್ಣ ಬಜೆಟ್ ಖಾಲಿಯದರೂ ಸರಿ, ವೈಜ್ಞಾನಿಕ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳಿಗೆ ಪ್ರೋತ್ಸಾಹ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದರು.
ಬೆಂಗಳೂರಿನ ರಕ್ಷಣಾ ಸಂಶೋದನೆ ಮತ್ತು ಅಭಿವೃದ್ಧಿ ಕೇಂದ್ರಗಳಲ್ಲಿ (ಡಿಆರ್ ಡಿಒ)ದಲ್ಲಿ ಐದು ಯುವ ಪ್ರಯೋಗಾಲಯಗಳನ್ನು ಉದ್ಘಾಟಿಸಿದ ಮೋದಿ, ಓರ್ವ ವಿಜ್ಞಾನಿ ತನ್ನ ಸಂಪೂರ್ಣ ಜೀವನವನ್ನು ಮುಡಿಪಾಗಿಟ್ಟು ದೇಶಕ್ಕೆ ಕೊಡುಗೆ ನೀಡುತ್ತಾನೆ. ಅಂತಹದರಲ್ಲಿ ದೇಶದ ಖಜಾನೆ ಯಾವ ಲೆಕ್ಕ. ಯುವ ಪ್ರಯೋಗಾಲಯಗಳಲ್ಲಿ ವಿಜ್ಞಾನಿಗಳು ನಿರಂತರವಾಗಿ ತಪ್ಪುಗಳನ್ನು ಮಾಡಲಿ. ಅದಕ್ಕಾಗಿ ಸಂಪೂರ್ಣ ಬೊಕ್ಕಸ ಖಾಲಿಯಾಗಲಿ. ಆದರೆ, ಪ್ರಯತ್ನ ಬಿಡಬಾರದು. ಹೊಸ ಆವಿಷ್ಕಾರಗಳಿಗೆ ನಾವು ಸದಾ ಸಿದ್ಧವಾಗಿರಬೇಕು ಎಂದರು.