ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಇತ್ತೀಚೆಗೆ ಬಂಧಿತನಾದ ರಿಷಿಕೇಶ್ ದೇವ್ಡೇಕರ್ ಅಲಿಯಾಸ್ ಮುರುಳಿಯನ್ನು ಎಸ್ ಐಟಿ ತಂಡ ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಹಿಂದೂ ವಿರೋಧಿಗಳೇ ತಮ್ಮ ಗುರಿ ಎಂದು ಸ್ಪೋಟಕ ಮಾಹಿತಿ ಬಹಿರಂಗಪಡಿಸಿದ್ದಾನೆ ಎನ್ನಲಾಗಿದೆ.
ಪ್ರಕರಣದಲ್ಲಿ 18ನೇ ಆರೋಪಿಯಾಗಿರುವ ಈತ, ಗೌರಿ ಲಂಕೇಶ್ ಹತ್ಯೆಯಲ್ಲಿ ಪ್ರಮುಖ ಪಾತ್ರವಹಿಸಿದ್ದನು . ಈತ ಹಿಂದೂ ವಿರೋಧಿಗಳನ್ನೇ ಕೇಂದ್ರಿಕರಿಸುತ್ತಿದ್ದ. ಹಿಂದೂ ಧರ್ಮದ ಕುರಿತು ಅವಹೇಳಕಾರಿ ಭಾಷಣ, ಹಿಂದೂ ಧರ್ಮದ ವಿರುದ್ಧ ಮಾತನಾಡುವವರನ್ನು ಟಾರ್ಗೆಟ್ ಮಾಡಿ ಹೊಸ ಹೊಸ ತಂಡ ರಚನೆ ಮಾಡಿ ಹಲವಾರು ಮಂದಿಯನ್ನ ಹತ್ಯೆ ಮಾಡಲು ಸಂಚೂ ರೂಪಿಸಿದ್ದ ಎನ್ನಲಾಗಿದೆ.
ಗೌರಿ ಲಂಕೇಶ್ ಹತ್ಯೆ ಆರೋಪಿ ಹೃಷಿಕೇಶ್ ಗೆ ಹಿಂದೂ ವಿರೋಧಿಗಳೇ ಟಾರ್ಗೆಟ್
Follow Us