ಬೆಂಗಳೂರು: ಗ್ರಾಮ ಪಂಚಾಯಿತಿ ಚುನಾವಣೆ ಅಧಿಸೂಚನೆ ಒಕ್ಕಣೆಯ ಕರ್ನಾಟಕ ರಾಜ್ಯಪತ್ರದ ಅಸಲೀಯತ್ತಿನ ಬಗ್ಗೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಕೂಡ ಪ್ರತಿಕ್ರಿಯಿಸಿದ್ದಾರೆ.
ನಮ್ಮ ಇಲಾಖೆಯಲ್ಲೇ ನಕಲಿ ಕುಮಾರಸ್ವಾಮಿ ಗ್ರಾ.ಪಂ.ಚುನಾವಣೆಯ ಗಜೆಟ್ ನೋಟಿಫಿಕೇಷನ್ ಹೊರಡಿಸಿದ್ದಾನೆ. ಇಲಾಖೆಯಿಂದ ಯಾವುದೇ ಚುನಾವಣೆ ಘೋಷಣೆ ಆಗಿಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನು ಕುಮಾರಸ್ವಾಮಿಯವರಂಥ ಶಿಷ್ಯರು ಮಾಡಿದ್ದಾರೋ ಅಥವಾ ಇನ್ಯಾರು ಮಾಡಿದ್ದಾರೋ ಗೊತ್ತಿಲ್ಲ ಎಂದು ಕುಮಾರಸ್ವಾಮಿ ಅವರಿಗೆ ಟಾಂಗ್ ಕೊಟ್ಟಿದ್ದಾರೆ.
ಗ್ರಾಪಂ ಚುನಾವಣೆ ಘೋಷಣೆಯಾಗಿಲ್ಲ- ಸಚಿವ ಈಶ್ವರಪ್ಪ
Follow Us