Sunday, May 29, 2022

ಛಲ ಬಿಡದ ತಿವಿಕ್ರಮ: ಸಿಎಂ ಪಟ್ಟ ಮತ್ತೆ ಅಲಂಕರಿಸಿದ ಬಿಎಸ್ ವೈ

Follow Us

* 2019 ಹಿನ್ನೋಟ

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಬಹುಮತದಿಂದ ಸ್ವಲ್ವವೇ ದೂರ ಉಳಿದಿದ್ದ ಬಿಜೆಪಿ  ವರ್ಷಾಂತ್ಯದಲ್ಲಿ ಮತ್ತೆ ಅಧಿಕಾರಕ್ಕೆ ಏರಿದ್ದು 2019ರ ರಾಜ್ಯ ರಾಜಕಾರಣದ ಬಹು ದೊಡ್ಡ ಬೆಳವಣಿಗೆ. ಬೆಳಗಾವಿಯ ಸಾಹುಕಾರ ಮೊಳಗಿಸಿದ ಬಂಡಾಯದ ಕಹಳೆ ಹಲವು ದಿನಗಳ ಕಾಲ ಜನರನ್ನು ಕುತೂಹಲಕ್ಕೆ ದೂಡಿತ್ತು. ಒಂದಲ್ಲ ಎರಡಲ್ಲ ಹದಿನೇಳು ಜನಪ್ರತಿನಿಧಿಗಳು ಏಕಾಏಕಿ ರಾಜೀನಾಮೆ ಸಲ್ಲಿಸಿದಾಗ ಭಾರೀ ಡ್ರಾಮವೇ ನಡೆಯಿತು. ಚಿಕ್ಕ ಮಕ್ಕಳು ಶಾಲೆಯ ಬೆಲ್ ಬಾರಿಸಿದಾಗ ತರಾತುರಿಯಲ್ಲಿ ತರಗತಿಗೆ ಒಡೋಡಿ ಬಂದು ಹಾಜರಾಗುವಂತೆ ಮುಂಬೈನಿಂದ ಹಾರಿ ಬಂದ ಶಾಸಕರು ತಮ್ಮ ರಾಜೀನಾಮೆ ಪತ್ರ ಸ್ಪೀಕರ್ ಗೆ ಸಲ್ಲಿಸಿದರು. ಆ ಬಳಿಕ ನಡೆದದ್ದು ಅನರ್ಹ ಪರ್ವ. ಸುಪ್ರೀಂ ಕೋರ್ಟ್ ಕದ ತಟ್ಟಿದ ಅನರ್ಹ ಶಾಸಕರು, ಅರ್ಹತೆ ಗಿಟ್ಟಿಸಿಕೊಳ್ಳಲು ಮತ್ತೆ ಜನರ ಬಳಿಗೆ ತೆರಳಬೇಕಾಯಿತು. ಹಿಂದಿನದ್ದನ್ನೆಲ್ಲ ಮರೆತು ಮತ್ತೆ ತಮ್ಮನ್ನು ಆರಿಸಿ ಕಳುಹಿಸುವಂತೆ ಮತದಾರ ಮಹಾಪ್ರಭುವಿಗೆ ಮನವಿ ಮಾಡಬೇಕಾಯಿತು.

ವಿಧಾನಸಭೆ ಉಪ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಯಡಿಯೂರಪ್ಪ ನೇತೃತ್ವದ ಸರ್ಕಾರ ಸದ್ಯದ ಮಟ್ಟಿಗೆ ಸ್ಥಿರವಾಗಿದೆ. ಚುನಾವಣೆಯ ಜಯದ ಮೂಲಕ ದೆಹಲಿ ಬಿಜೆಪಿ ನಾಯಕರಿಗೆ ಸಂದೇಶ ರವಾನಿಸಿರುವ ಬಿಎಸ್ ವೈ, ಅಂತರ ಕಾಯ್ದುಕೊಳ್ಳುವ ಪರೋಕ್ಷ ಸೂಚನೆ ಕೂಡ ನೀಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಜತೆಗಿನ ಶೀತಲಸಮರ ಸದ್ದು ಮಾಡುತ್ತಿದ್ದರೂ ಆಡಳಿತ ವಿಚಾರದಲ್ಲಿ ಮಾತ್ರ ಬಿಗಿ ನಿಲುವು ಪ್ರದರ್ಶಿಸುತ್ತಿದ್ದಾರೆ.

2019ರ ಕೊನೆಯ ತಿಂಗಳಲ್ಲಿ ನಡೆಯಬೇಕಿದ್ದ ಸಂಪುಟ ವಿಸ್ತರಣೆ ಸದ್ಯಕ್ಕೆ ಮುಂದೂಡಿಕೆಯಾಗಿದೆ. 2020ರಲ್ಲಿ ಬಿಎಸ್ ವೈಗೆ ಇದೇ ಪ್ರಮುಖ ಸವಾಲು. ಸಂಪುಟ ವಿಸ್ತರಣೆಯೊಂದಿಗೆ ಭಿನ್ನಮತ ಭುಗಿಲೇಳುವ ಸಾಧ್ಯತೆಯನ್ನು ಕೂಡ ತಳ್ಳಿಹಾಕುವಂತಿಲ್ಲ. ಉಪ ಮುಖ್ಯಮಂತ್ರಿ ಪದವಿ ಪ್ರತಿಷ್ಟೆಯಾಗಿ ಬದಲಾಗಿದ್ದು, ಇದು ಕೂಡ ರಾಜಕೀಯ ಬಿರುಗಾಳಿಯ ಮುನ್ಸೂಚನೆ ನೀಡಿದೆ. ಈ ಎಲ್ಲ ಸವಾಲುಗಳನ್ನು ಯಡಿಯೂರಪ್ಪ ಹೇಗೆ ನಿಭಾಯಿಸಲಿದ್ದಾರೆ ಎಂಬುದನ್ನು 2020ರಲ್ಲಿ ನೋಡಬೇಕಿದೆ.

ಮತ್ತಷ್ಟು ಸುದ್ದಿಗಳು

Latest News

ಬೈಕ್ ಸ್ಟಂಟ್ ಪ್ರದರ್ಶನ: ಮೂವರ ಬಂಧನ

newsics.com ನೋಯ್ಡಾ : ಬೈಕ್ ಮೇಲೆ ಶಕ್ತಿಮಾನ್ ರೀತಿಯಲ್ಲಿ ಸ್ಟಂಟ್ ಮಾಡಲು ಪ್ರಯತ್ನಿಸಿದಕ್ಕಾಗಿ ಪೋಲಿಸರು ಮೂವರನ್ನು ಬಂಧಿಸಿದ್ದಾರೆ. ಕೆಲವು ದಿನಗಳ ಹಿಂದೆ ಇದೇ ರೀತಿ ಅಜಯ್ ದೇವಗನ್ ಅವರಿಂದ...

ಆಧಾರ್ ಕಾರ್ಡ್‌ನ ಕೊನೆಯ 4 ಅಂಕೆ ಮಾತ್ರ ಬಳಕೆಗೆ ಕೇಂದ್ರ ಸೂಚನೆ

newsics.com ನವದೆಹಲಿ: ಆಧಾರ್ ಕಾರ್ಡ್‌ನ ದುರ್ಬಳಕೆಯನ್ನು ತಡೆಯಲು ಕೇಂದ್ರ ಸರ್ಕಾರ ಹೊಸ ನಿಯಮ ಜಾರಿಗೊಳಿಸಿದೆ. ಅದುವೇ ಮುಖವಾಡದ ಆಧಾರ್ ಕಾರ್ಡ್. ಅಂದರೆ ಸಾಮಾನ್ಯವಾಗಿ ಆಧಾರ್ ಕಾರ್ಡ್‌ನ ಜೆರಾಕ್ಸ್ ಪ್ರತಿಗಳನ್ನು ನೀಡುವಾಗ ಆಧಾರ್ ಕಾರ್ಡ್‌ನಲ್ಲಿರುವ 12...

22 ಪ್ರಯಾಣಿಕರನ್ನು ಹೊತ್ತ ನೇಪಾಳ ವಿಮಾನ ನಾಪತ್ತೆ

newsics.com ಕಠ್ಮಂಡು: ನೇಪಾಳದಲ್ಲಿ ಖಾಸಗಿ ವಿಮಾನಯಾನ ಸಂಸ್ಥೆಯು ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ನಾಲ್ವರು ಭಾರತೀಯರು ಸೇರಿದಂತೆ 22 ಜನರೊಂದಿಗೆ ಇಂದು ನಾಪತ್ತೆಯಾಗಿದೆ ಎಂದು ಏರ್‌ಲೈನ್ ಅಧಿಕಾರಿಗಳು ತಿಳಿಸಿದ್ದಾರೆ. ತಾರಾ ಏರ್ 9 NAET ಅವಳಿ-ಎಂಜಿನ್...
- Advertisement -
error: Content is protected !!