ಬೆಂಗಳೂರು: ಶಾಲಾ ಪಠ್ಯಕ್ರಮದಿಂದ ಟಿಪ್ಪು ಜಯಂತಿಯನ್ನು ತೆಗೆಯುವ ನಿರ್ಧಾರವನ್ನು ರಾಜ್ಯ ಬಿಜೆಪಿ ಸರ್ಕಾರ ಮಾಡಿದೆ.
ಮೊದಲಿನಿಂದಲೂ ಟಿಪ್ಪು ಜಯಂತಿಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದ ಬಿಜೆಪಿ ನಾಯಕರು ಈಗ ತಮ್ಮದೇ ಸರ್ಕಾರ ಇರುವ ಕಾರಣಕ್ಕೆ ಟಿಪ್ಪು ಜಯಂತಿ ನಿಷೇಧದ ಜತೆಯಲ್ಲಿಯೇ ಟಿಪ್ಪುವಿನ ಜೀವನ, ಹೋರಾಟದ ಬಗ್ಗೆಯೂ ಮಕ್ಕಳಿಗೆ ಶಿಕ್ಷಣ ಕೊಡುವುದು ಬೇಡ ಎಂಬ ತೀರ್ಮಾನವನ್ನು ಪ್ರಕಟಿಸಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪನವರೂ ಇಂದು ಟಿಪ್ಪು ಇತಿಹಾಸ ಪಠ್ಯದಿಂದ ಹೊರತೆಗೆಯುವ ಬಗ್ಗೆ ಸೂಚನೆ ನೀಡಿದ್ದಾರೆ. ಮತ್ತೊಮ್ಮೆ ಪರಿಶೀಲನೆ ಮಾಡುತ್ತೇನೆ ಎಂದಿದ್ದಾರೆ..
ಆದರೆ ರಾಜ್ಯಸರ್ಕಾರದ ಕ್ರಮವನ್ನು ಜೆಡಿಎಸ್, ಕಾಂಗ್ರೆಸ್ ನಾಯಕರು ವಿರೋಧ ಮಾಡುತ್ತಿದ್ದಾರೆ. ಟಿಪ್ಪು ಜಯಂತಿ ನಿಷೇಧವನ್ನೇ ದ್ವೇಷದ ರಾಜಕಾರಣ ಎಂದಿದ್ದ ಪ್ರತಿಪಕ್ಷಗಳು ಈಗ ಮತ್ತೆ ಬಿಜೆಪಿ ವಿರುದ್ಧ ಸತತ ವಾಗ್ದಾಳಿ ನಡೆಸುತ್ತಿದ್ದಾರೆ. ಸಿದ್ದರಾಮಯ್ಯನವರಂತೂ ಯಡಿಯೂರಪ್ಪನವರಿಗೆ ಇತಿಹಾಸವೇ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.