* ಡಿಕೆಶಿ, ಆಪ್ತರಿಗೆ ಸಂಕಷ್ಟ
ಬೆಂಗಳೂರು:
ಐಟಿ ಇಲಾಖೆ ಅಧಿಕಾರಿಗಳ ದಾಳಿ ವೇಳೆ ಮನೆಯಲ್ಲಿ ಪತ್ತೆಯಾದ ಹಣದ ವಿಚಾರಣೆ ಕೈಬಿಡಲು ಕೋರಿ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಸಲ್ಕಿಸಿದ್ದ ಮೆಲ್ಮನವಿಯನ್ನು ಹೈಕೋರ್ಟ್ ವಜಾಗೊಳಿಸಿದೆ.ಹೈಕೋರ್ಟ್ ಏಕ ಸದಸ್ಯ ಪೀಠದಲ್ಲಿದ್ದ ನ್ಯಾಯಮೂರ್ತಿ ಬಿ.ಎ.ಪಾಟೀಲ್ ಈ ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸಿದರು.ಡಿಕೆ ಶಿವಕುಮಾರ್ ಆಪ್ತರಾದ ಸುನೀಲ್ ಕುಮಾರ್ ಶರ್ಮಾ, ರಾಜೇಂದ್ರ ಹಾಗೂ ಆಂಜನೇಯ ಅವರು ಸಲ್ಲಿಸಿದ ಅರ್ಜಿಯನ್ನೂ ಕೋರ್ಟ್ ಪುರಸ್ಕರಿಸಿಲ್ಲ.ಹೈಕೋರ್ಟ್ ಅರ್ಜಿ ವಜಾಗೊಳಿಸಿದ್ದರಿಂದ ಡಿಕೆ ಶಿವಕುಮಾರ್ ಹಾಗೂ ಅವರ ಆಪ್ತರಿಗೆ ಮತ್ತೆ ಸಂಕಷ್ಟ ಎದುರಾಗಿದೆ.
