Saturday, January 28, 2023

ಡಿಸೆಂಬರ್ 9 ಯಾರಿಗೆ ತರಲಿದೆ ಅದೃಷ್ಟ: ರಾಜ್ಯ ರಾಜಕೀಯದಲ್ಲಿ ವದಂತಿಗಳ ಸಂತೆ

Follow Us

ನವದೆಹಲಿ: ಕನಿಷ್ಟ ಸಿಕ್ಸ್ರ್ ರ್ ಬಾರಿಸಿದರೆ ಮುಖ್ಯಮಂತ್ರಿ  ಯಡಿಯೂರಪ್ಪ ಸದ್ಯಕ್ಕೆ ಸೇಫ್. ಅಪ್ಪಿ ತಪ್ಪಿ ಕನಿಷ್ಠ ಸ್ಛಾನ ಬಂದರೆ ಏನು ಗತಿ. ಇದು ಮತ ಎಣಿಕೆಗೆ ‍ಒಂದು ದಿನ ಮೊದಲು ವಿಧಾನಸಭೆಯ ಮೊಗಸಾಲೆಯಲ್ಲಿ ಕೇಳಿ ಬಂದ ಮಾತು. ಮತದಾನೋತ್ತರ ಸಮೀಕ್ಷೆ ಬಿಜೆಪಿಗೆ ಮೇಲುಗೈಯ ಸೂಚನೆ ನೀಡಿದೆಯಾದರೂ ಅದನ್ನೇ ಪೂರ್ತಿಯಾಗಿ ನಂಬುವ ಸ್ಥಿತಿಯಲ್ಲಿ ಬಿಜೆಪಿ ನಾಯಕರಿಲ್ಲ.  ಅವರ ಮುಂದೆ ಮಹಾರಾಷ್ಟ್ರ ವಿಧಾನಸಭೆಯ ಚುನಾವಣೋತ್ತರ ಸಮೀಕ್ಷೆಯಿದೆ. ಬಿಜೆಪಿಗೆ ಏಕಾಂಗಿಯಾಗಿ ಸ್ಪಷ್ಟ ಬಹುಮತ ದೊರೆಯಲಿದೆ. ಕಮಲ ಭರ್ಜರಿ ಭೇಟೆಯಾಡಲಿದೆ. ಹೀಗೆ ಅತೀ ರಂಜಿತವಾಗಿ ಬಂದ ಸಮೀಕ್ಷೆಗಳನ್ನು ಬಿಜೆಪಿ ಸ್ವಲ್ಪಮಟ್ಟಿಗೆ ನಂಬಿತ್ತು. ಆದರೆ ಆ ಬಳಿಕ ನಡೆದದ್ದು ಮಾತ್ರ ಇತಿಹಾಸ.

ಬಿಜೆಪಿಯ ಪ್ಲಸ್ ಮತ್ತು ಮೈನಸ್ ಅಂಶಗಳು

ಮುಖ್ಯಮಂತ್ರಿ ಯಡಿಯೂರಪ್ಪ  ಅವರ ಸಮರ್ಥ ನಾಯಕತ್ವ. ಲಿಂಗಾಯಿತ ಸಮುದಾಯದ ಪ್ರಶ್ನಾತೀತ ಮುಖಂಡ ಎಂಬ ಹೆಗ್ಗಳಿಕೆ. ರಾಜ್ಯ ಮತ್ತು ಕೇಂದ್ರದಲ್ಲಿ ಒಂದೇ ಪಕ್ಷದ ಆಡಳಿತ. ಹಠ ಬಿಡದೆ ಹೇಳಿದ್ದನ್ನು ಮಾಡಿ ತೋರಿಸುವ ಛಲ. ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ತಮ್ಮ ಬೆಂಬಲಿಗರಿಗೆ ಇಲ್ಲದಿದ್ದರೂ ಪಕ್ಷದ ಚಟುವಟಿಕೆಗಳ ಮೇಲೆ ನಿಯಂತ್ರಣ ಹೇರುವ ಶಕ್ತಿ ಇದು ಬಿಜೆಪಿಯ ಅದರಲ್ಲೂ ಮುಖ್ಯವಾಗಿ ಬಿಎಸ್ ವೈ ಪ್ಲಸ್ ಪಾಯಿಂಟ್. ಇನ್ನು ಮೈನಸ್ ಅಂಶಗಳು ಕೂಡ ಇವೆ. ವಲಸಿಗ ನಾಯಕರಿಗೆ ಮಣೆಹಾಕಿದ ಪರಿಣಾಮ ಹೊಸಕೋಟೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಬಂಡಾಯ. ಬಿಜೆಪಿ ಬಿಟ್ಟು ಹಾರಿದ ರಾಜು ಕಾಗೆ. ತಳಮಟ್ಟದಲ್ಲಿ ಸಮನ್ವಯದ ಕೊರತೆ. ಭೀಕರ ಪ್ರವಾಹಕ್ಕೆ ಸರಿಯಾಗಿ ಸ್ಪಂದಿಸದ ಕೇಂದ್ರ ಸರ್ಕಾರ. ಇದು ಬಿಜೆಪಿಯ ಸಾಧನೆ ಮೇಲೆ ಪರಿಣಾಮ ಬೀರಲಿದೆ.

ಕಾಂಗ್ರೆಸ್ ಶೀತಲ ಸಮರದ ಲಾಭ ಯಾರಿಗೆ

ಬಣಗಳಾಗಿ ಹಂಚಿ ಹೋಗಿರುವ ಕಾಂಗ್ರೆಸ್ ಈ ಚುನಾವಣಾ ಸಮರದಲ್ಲಿ ಎಲ್ಲೂ ಒಗ್ಗಟ್ಟಿನ ಮಂತ್ರ ಪ್ರದರ್ಶಿಸಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹೊರತುಪಡಿಸಿದರೆ  ಇನ್ನುಳಿದ ಹೆಚ್ಚಿನ ನಾಯಕರು ತೋರಿಕೆಯ ರೀತಿಯಲ್ಲಿ ಪ್ರಚಾರದಲ್ಲಿ ಪಾಲ್ಗೊಂಡರು. ಒಂದೊಂದು ನಾಯಕರು ಒಂದೊಂದು ದಿಕ್ಕಿನಲ್ಲಿ ಕಾಣಿಸಿಕೊಂಡರು. ಮಹಾರಾಷ್ಟ ಸರ್ಕಾರ ರಚನೆ ಬಳಿಕ ಧಿಡೀರನೆ  ನಾಯಕರ ಮಧ್ಯೆ ಪ್ರೀತಿಯ ಸೆಲೆ ಉಕ್ಕಿ ಹರಿಯಿತ್ತಾದರೂ ಆಗ ಕಾಲ ಮಿಂಚಿ ಹೋಗಿತ್ತು.

ಜೆಡಿಎಸ್ ಕಪ್ಪು ಕುದುರೆ

ಈ ಚುನಾವಣೆಯಲ್ಲಿ ಜೆಡಿಎಸ್ ಪಡೆಯಲಿರುವ ಸ್ಥಾನ ರಾಜ್ಯ  ರಾಜಕೀಯದಲ್ಲಿ ಅದರ ಪ್ರಸಕ್ತತೆತೆಯನ್ನು ನಿರ್ಧರಿಸಲಿದೆ. ಬಿಜೆಪಿಗೆ ಬಹುಮತಕ್ಕೆ ಸಂಖ್ಯಾ  ಬಲದ ಕೊರತೆಯಾದರೆ ಜೆ಼ಡಿಎಸ್ ಕದ ತಟ್ಟಲಿದೆ. ಕಾಂಗ್ರೆಸ್ ಕೂಡ ಈ ಸಂದರ್ಭದಲ್ಲಿ ಮರು ಮದುವೆ ಪ್ರಸ್ತಾಪ ಮಾಡುವ ಸಾಧ್ಯತೆ ಯಿದೆ. ಮೈನಸ್ ಸಿದ್ದರಾಮಯ್ಯ ಕಾಂಗ್ರೆಸ್ ಜೊತೆ ಮೈತ್ರಿಗೆ ಸಿದ್ದ ಎಂದು ದೊಡ್ಡ ಗೌಡರು ದಾಳ ಉರುಳಿಸಿದರೇ ಕೈ ಪಕ್ಷ ಇಕ್ಕಟ್ಟಿಗೆ ಸಿಲುಕಲಿದೆ. ಈ ಪರಿಸ್ಥಿತಿಯಲ್ಲಿ ಖರ್ಗೆ ಅಚ್ಚರಿಯ ನಾಯಕನಾಗಿ ಹೊರಹೊಮ್ಮಿದರೂ ಅಚ್ಚರಿಯಿಲ್ಲ. ಈ ಎಲ್ಲ ಪ್ರಶ್ನೆಗಳಿಗೆ ಡಿಸೆಂಬರ್ 9 ರಂದು ಉತ್ತರ ದೊರೆಯಲಿದೆ.

ಮತ್ತಷ್ಟು ಸುದ್ದಿಗಳು

vertical

Latest News

ಥೈಲ್ಯಾಂಡ್‌ನಲ್ಲಿ ಜಾಲಿ ಮೂಡ್‌ನಲ್ಲಿ ಬಿಗ್‌ ಬಾಸ್‌ ಅಮೂಲ್ಯ

newsics.com ಬೆಂಗಳೂರು: ಕಮಲಿ ಸೀರಿಯಲ್ ನಲ್ಲಿ ರಂಜಿಸಿ, ಬಳಿಕ ಬಿಗ್ ಬಾಸ್‌ನಲ್ಲಿ ಸಖತ್ ಸದ್ದು ಮಾಡಿದ ಮುದ್ದು ಹುಡುಗಿ ಅಮೂಲ್ಯ ಗೌಡ, ಸದ್ಯ ಜಾಲಿ ಮೂಡ್ ನಲ್ಲಿದ್ದಾರೆ. ಈ...

ಟಿ20 ಸರಣಿ: ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ಸೋಲು

newsics.com ರಾಂಚಿ: ಟಿ20 ಸರಣಿಯ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ ಸೋಲನುಭವಿಸಿದೆ. ರಾಂಚಿಯಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಪ್ರವಾಸಿ ತಂಡ ನ್ಯೂಜಿಲೆಂಡ್ 21 ರನ್‌ಗಳ ಜಯ ದಾಖಲಿಸಿದೆ. ಟಾಸ್‌ ಗೆದ್ದ ಭಾರತ ನ್ಯೂಜಿಲೆಂಡ್‌ಗೆ...

55 ಪ್ರಯಾಣಿಕರನ್ನು ಬಿಟ್ಟು ಟೇಕಾಫ್ ಮಾಡಿದ ಗೋ ಫಸ್ಟ್ ಏರ್‌ಲೈನ್‌ಗೆ 10 ಲಕ್ಷ ದಂಡ

newsics.com ದೆಹಲಿ: 55 ಪ್ರಯಾಣಿಕರನ್ನು ಬಿಟ್ಟು ಟೇಕಾಫ್ ಮಾಡಿದ ಗೋ ಫಸ್ಟ್ ಏರ್‌ಲೈನ್‌ಗೆ 10 ಲಕ್ಷ ದಂಡ ವಿಧಿಸಲಾಗಿದೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ 55 ಪ್ರಯಾಣಿಕರನ್ನು ಬಿಟ್ಟು ಟೇಕಾಫ್ ಮಾಡಿದ ವಿಮಾನವೊಂದರ ಬಗ್ಗೆ ನಾಗರಿಕ ವಿಮಾನಯಾನ ನಿಯಂತ್ರಕ...
- Advertisement -
error: Content is protected !!