ಬೆಂಗಳೂರು: ರಾಜ್ಯದ ರಂಗಭೂಮಿಯಲ್ಲಿ ಸಂಚಲನ ಮೂಡಿಸಿ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿರುವ ‘ಮುಖ್ಯಮಂತ್ರಿ’ ನಾಟಕ ಈಗ ಹೊಸ ದಾಖಲೆ ನಿರ್ಮಿಸಲು ಮುಂದಾಗಿದೆ.
ರಂಗಕರ್ಮಿ, ನಟ ಮುಖ್ಯಮಂತ್ರಿ
ಚಂದ್ರು ಸ್ಥಾಪಿಸಿರುವ ಕಲಾ ಗಂಗೋತ್ರಿ
ರಂಗ ತಂಡಕ್ಕೆ
49 ವರ್ಷಗಳಾಗಿದ್ದು, ಡಿ.31ರಿಂದ ಜನವರಿ 5 ರವರೆಗೆ 6 ದಿನಗಳ ‘ಅಮೃತ ರಂಗ ಹಬ್ಬ’
ಆಯೋಜಿಸಲಾಗಿದೆ. 4ರಂದು ‘ಮುಖ್ಯಮಂತ್ರಿ’ ನಾಟಕ 700ನೇ ರವೀಂದ್ರ ಕಲಾ ಕ್ಷೇತ್ರದಲ್ಲಿ ಪ್ರದರ್ಶನಗೊಳ್ಳಲಿದೆ.