ಬೆಂಗಳೂರು: ಟೀ ಕಾಫಿಯಷ್ಟೇ ಅಲ್ಲ, ಹೋಟೆಲ್ ತಿಂಡಿ ದುಬಾರಿಯಾಗಿದೆ.
ಐದರಿಂದ ಹತ್ತು ರೂಪಾಯಿಯಷ್ಟು ದರ ಹೆಚ್ಚಿಸಲಾಗಿದೆ ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್ ತಿಳಿಸಿದ್ದಾರೆ.
ಹಾಲು, ಅನಿಲ ದರ ಏರಿಕೆ ಹಿನ್ನೆಲೆಯಲ್ಲಿ ದರ ಏರಿಕೆ ಅನಿವಾರ್ಯವಾಗಿತ್ತು ಎಂದು ಸಂಘದ ನಿರ್ಧಾರವನ್ನು ಪಿ.ಸಿ. ರಾವ್ ಸಮರ್ಥಿಸಿಕೊಂಡಿದ್ದಾರೆ.