Thursday, October 6, 2022

ನನಗೆ ಜೀವ ಬೆದರಿಕೆ ಕರೆ ಬರುತ್ತಿದೆ: ಸಂಜನಾ ಆರೋಪ

Follow Us

ಬೆಂಗಳೂರು:  ಚಿತ್ರ ನಿರ್ಮಾಪಕಿ ವಂದನಾ ಜೈನ್ ಜೊತೆ ಕಿರಿಕ್ ಮಾಡಿ ಸುದ್ದಿಯಲ್ಲಿರುವ ನಟಿ ಸಂಜನಾ ಇದೀಗ ಗಂಭೀರ ಆರೋಪ ಮಾಡಿದ್ದಾರೆ. ಇಂದು  ಕೇಂದ್ರ ಡಿ ಸಿ ಪಿ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನನಗೆ ಜೀವ ಬೆದರಿಕೆ ಕರೆ ಬಂದಿದೆ ಎಂದು ಆರೋಪಿಸಿದರು. ಜೈಲ್ಲಿನಲ್ಲಿ ಹಾಕಿ ಕೊಲ್ಲುವುದಾಗಿ ದೂರವಾಣಿ ಮೂಲಕ ಬೆದರಿಕೆ ಹಾಕಲಾಗಿದೆ ಎಂದು ಹೇಳಿದರು. ರಾತ್ರಿ ಎರಡು ಗಂಟೆಗೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಹಾಜರಾಗುವಂತೆ ದೂರವಾಣಿ ಮೂಲಕ ಒತ್ತಾಯಿಸಲಾಗಿತ್ತು. ಇದು ಯಾವ ನ್ಯಾಯ ಎಂದು ಸಂಜನಾ ಪ್ರಶ್ನಿಸಿದ್ದಾರೆ. ಈ ದೂರವಾಣಿ ಕರೆ ಯಾರು ಮಾಡಿದ್ದಾರೆ ಎಂಬುದು ತಿಳಿದಿಲ್ಲ. ಈ  ಪ್ರಕರಣವನ್ನು ಹಿರಿಯ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ ಎಂದು ಸಂಜನಾ ತಿಳಿಸಿದರು.

ಮತ್ತಷ್ಟು ಸುದ್ದಿಗಳು

vertical

Latest News

12 ಕೋಟಿ ದರೋಡೆ ಮಾಡಿ ಬುರ್ಕಾ ಧರಿಸಿ ಓಡಾಡುತ್ತಿದ್ದ ಆರೋಪಿ ಬಂಧನ

newsics.com ಮುಂಬೈ: ಪ್ರತಿಷ್ಟಿತ ಖಾಸಗಿ ಬ್ಯಾಂಕ್ ನಿಂದ 12 ಕೋಟಿ ರೂಪಾಯಿ ಅಪಹರಿಸಿದ ಆರೋಪಿಯನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಅಲ್ತಾಫ್ ಶೇೇಖ್ ಎಂದು ಗುರುತಿಸಲಾಗಿದೆ. ಐಸಿಐಸಿಐ...

78 ವರ್ಷದ ಅಜ್ಜನಿಗೂ 18 ವರ್ಷದ ಯುವತಿಗೂ ಮದ್ವೆ

newsics.com ಫಿಲಿಪೈನ್ಸ್ :ಹದಿನೈದನೇ ವಯಸ್ಸಿನಲ್ಲಿ ಲವ್​ನಲ್ಲಿ ಬಿದ್ದ ಯುವತಿಹಯೊಬ್ಬಳು ಅಂತಿಮವಾಗಿ 78 ವರ್ಷದ ಅಜ್ಜನ ಜೊತೆ ಅಧಿಕೃತವಾಗಿ ಸಪ್ತಪದಿ ತುಳಿದಿದ್ದಾಳೆ. 78 ವರ್ಷದ ನಿವೃತ್ತ ರೈತ ಅಜ್ಜನನ್ನು 3 ವರ್ಷ ಪ್ರೀತಿಸಿ 18 ತುಂಬಿದ ಬಳಿಕ ಮದುವೆಯಾಗಿದ್ದಾಳೆ....

ತೀವ್ರ ಹೊಟ್ಟೆ ನೋವೆಂದು ಆಸ್ಪತ್ರೆಗೆ ದಾಖಲಾದ ವೃದ್ಧ-ಹೊಟ್ಟೆಯಲ್ಲಿ ಲೋಟ!!

newsics.com ಮಧ್ಯಪ್ರದೇಶ: ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ವೃದ್ಧನ ಹೊಟ್ಟೆಯಲ್ಲಿ ಲೋಟ ಪತ್ತೆಯಾಗಿದೆ. ವೃದ್ಧನನನ್ನು ಸ್ಥಳೀಯ ಜಿಲ್ಲಾಸ್ಪತ್ರೆಗೆ ದಾಖಲಿಸಿ, ಅಲ್ಲಿನ ವೈದ್ಯರು ಆತನಿಗೆ ಕೆಲವು ಪರೀಕ್ಷೆಗಳನ್ನು ಮಾಡಿದರು. ವರದಿಗಳನ್ನು ಪರಿಶೀಲಿಸಿದ ವೈದ್ಯರು ಬೆಚ್ಚಿಬಿದಿದ್ದಾರೆ. ವೃದ್ಧನ ಹೊಟ್ಟೆಯಲ್ಲಿ...
- Advertisement -
error: Content is protected !!