ಬೆಂಗಳೂರು: ಈಕ್ವೆಡಾರ್ನ ಯಾವುದೇ ದ್ವೀಪವನ್ನು ಸ್ವಘೋಷಿತ ದೇವಮಾನವ ನಿತ್ಯಾನಂದರಿಗೆ ಮಾರಾಟ ಮಾಡಿಲ್ಲ ಎಂದು ಈಕ್ವೆಡಾರ್ ರಾಯಭಾರ ಕಚೇರಿ ಸ್ಪಷ್ಟಪಡಿಸಿದೆ.
ದಕ್ಷಿಣ ಅಮೆರಿಕದ ಆಸುಪಾಸಿನಲ್ಲೂ ಯಾವುದೇ ಪ್ರದೇಶ ಖರೀದಿಸಲು ನಿತ್ಯಾನಂದರಿಗೆ ನೇರವಾಗಿಲ್ಲ ಎಂದೂ ಈಕ್ವೆಡಾರ್ ಸ್ಪಷ್ಟಪಡಿಸಿದೆ.
ಬಿಡದಿ ಯೋಗ ಧ್ಯಾನಪೀಠಂನ ಸ್ಥಾಪಕ ನಿತ್ಯಾನಂದ ಈಕ್ವೆಡಾರ್ ದೇಶದ ಒಂದು ದ್ವೀಪ ಖರೀದಿಸಿದ್ದಾರೆ ಎಂಬ ಸುದ್ದಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.
ನಿತ್ಯಾನಂದ ತಮ್ಮ ದೇಶಕ್ಕೆ ಆಶ್ರಯ ಕೋರಿ ಬಂದಿದ್ದು ನಿಜ. ಆದರೆ, ಅವರಿಗೆ ತಾವು ಆಶ್ರಯ ನೀಡಲಿಲ್ಲ. ಅದಾದ ಬಳಿಕ ನಿತ್ಯಾನಂದ ಈಕ್ವೆಡಾರ್ ಬಿಟ್ಟು ಹೈಟಿ ದೇಶಕ್ಕೆ ಹೋದರು ಎಂದು ಈಕ್ವೆಡಾರ್ನ ರಾಯಭಾರ ಕಚೇರಿ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ. ಮಾಧ್ಯಮಗಳಿಗೆ ಹೇಳಿಕೆ ನೀಡುವಾಗ ಈಕ್ವೆಡಾರ್ ಪ್ರಸ್ತಾಪ ಮಾಡಬಾರದೆಂದೂ ಮನವಿ ಮಾಡಿದೆ.
ನಿತ್ಯಾನಂದಗೆ ಯಾವುದೇ ದ್ವೀಪ ಮಾರಿಲ್ಲ- ಈಕ್ವೆಡಾರ್ ಸ್ಪಷ್ಟನೆ
Follow Us