ಮಂಗಳೂರು: ಕರಾವಳಿಯ ಜನತೆ ದಶಕಗಳಿಂದ ಎದುರು ನೋಡುತ್ತಿರುವ ಪಂಪ್ ವೆಲ್ ಫ್ಲೈ ಒವರ್ ಉದ್ಘಾಟನೆ ಮತ್ತೇ ಮುಂದೂಡಿಕೆಯಾಗಿದೆ. ಕಾಮಗಾರಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಒಂದು ತಿಂಗಳ ಅವಧಿಗೆ ಮುಂದೂಡಲಾಗಿದೆ. ಜನವರಿ 31 ಹೊಸ ಡೆಡ್ ಲೈನ್ ಎಂದು ನಿಗದಿಪಡಿಸಲಾಗಿದೆ. ಈ ಮಧ್ಯೆ ವಿಳಂಬ ಸರಣಿ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ರಾಜಕೀಯ ನಾಯಕರನ್ನು ಅದರಲ್ಲೂ ಮುಖ್ಯವಾಗಿ ಸಂಸತ್ ಸದಸ್ಯ ನಳೀನ್ ಕುಮಾರ್ ಕಟೀಲ್ ಅವರನ್ನು ಗುರಿಯಾಗಿರಿಸಿ ಟೀಕಾ ಪ್ರಹಾರವೇ ಹರಿದಾಡುತ್ತಿದೆ.