ಮೈಸೂರು: ಸಿಎಎ ಹಾಗೂ ಎನ್ ಅರ್ ಸಿ ಪರ, ವಿರೋಧಿ ಪ್ರತಿಭಟನೆಗಳು ರಾಜ್ಯದ ಪ್ರವಾಸೋದ್ಯಮದ ಮೇಲೆ ದುಷ್ಪರಿಣಾಮ ಬೀರಿವೆ.
ಪ್ರತಿಭಟನೆಗಳು ಆರಂಭವಾದ ಬಳಿಕ ಮೈಸೂರಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ ಎಂಬುದು ಮೈಸೂರು ಹೋಟೆಲ್ ಅಸೋಸಿಯೇಷನ್ ನಡೆಸಿದ ಸಮೀಕ್ಷೆಯಿಂದ ಬಹಿರಂಗವಾಗಿದೆ.
ಈ ಪ್ರತಿಭಟನೆಗಳಿಂದ ಶೇ.20ರಿಂದ 40ರಷ್ಟು ಪ್ರವಾಸಿಗರು ಭೇಟಿ ನೀಡಿಲ್ಲ. ಪ್ರತಿ ವರ್ಷ ಹೊಸ ವರ್ಷಾಚರಣೆಯ ಹತ್ತು ದಿನಗಳ ಮುಂಚೆಯೆ ಹೋಟೆಲ್ ರೆಸಾರ್ಟ್ ಗಳು ಭರ್ತಿಯಾಗುತ್ತಿದ್ದವು. ಆದರೆ ಈ ಬಾರಿ ಹೊಸ ವರ್ಷಕ್ಕೆ ಹತ್ತಿರದಲ್ಲಿದ್ದರೂ ರಾಜ್ಯದ ರೆಸಾರ್ಟ್ ಗಳು, ಹೋಟೆಲ್ ಗಳು ಪ್ರವಾಸಿಗರಿಲ್ಲದೆ ಭಣಗುಡುತ್ತಿವೆ. ಹಲವರು ಮುಂಚಿತವಾಗಿಯೇ ಕಾದಿರಿಸಿದ್ದ ಹೋಟೆಲ್, ರೆಸಾರ್ಟ್ ವಸವನ್ನು ಪ್ರತಿಭಟನೆ ಹಿನ್ನೆಲೆಯಲ್ಲಿ ರದ್ದುಗೊಳಿಸಿದ್ದಾರೆ. ಪ್ರತಿಭಟನೆಗಳಿಂದಾಗಿ ಮೈಸೂರಿಗೆ ಬರುವ ಪ್ರವಾಸಿಗರಲ್ಲಿ ಶೇ 40%ರಷ್ಟು ಕಡಿಮೆಯಾಗಿದೆ ಎಂದು ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ನಾರಾಯಣ್ ಗೌಡ ತಿಳಿಸಿದ್ದಾರೆ.