ಶಿವಮೊಗ್ಗ: ಸಾವಯವ ಕೃಷಿಕರಿಗೆ ಅನುಕೂಲವಾಗುವಂತೆ ಬಜೆಟ್ ರೂಪಿಸುವೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಸೋಮವಾರ ಸುಭಿಕ್ಷಾ ಸಾವಯವ ಕೃಷಿಕರ ಬಹುರಾಜ್ಯ ಸಹಕಾರ ಸಂಘಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಾವಯವ ಕೃಷಿಕರ ಸಮಸ್ಯೆ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವೆ ಎಂದರು.
ಬಜೆಟ್ ಬಳಿಕ ತಿಂಗಳಲ್ಲಿ ಒಂದು ದಿನ ಜಿಲ್ಲೆ ಅಥವಾ ತಾಲೂಕು ಕೇಂದ್ರಗಳಲ್ಲಿ ಸಾವಯವ ಕೃಷಿಕರನ್ನು ಭೇಟಿಯಾಗುತ್ತೇನೆ. ಕನಿಷ್ಠ 50 ಸಾವಿರ ರೈತರು, ಕೃಷಿ ವಲಯದ ಪರಿಣಿತರು, ಸಂಶೋಧಕರ ಸಭೆ ನಡೆಸುತ್ತೇನೆ ಎಂದು ಯಡಿಯೂರಪ್ಪ ತಿಳಿಸಿದರು.
ರಾಜ್ಯದಲ್ಲಿರುವ 50 ಸಾವಿರ ಸಾವಯವ ಕೃಷಿಕರು 10 ಮಂದಿಗೆ ಪ್ರೇರಣೆ ನೀಡಿದರೆ ಇನ್ನೊಂದು ವರ್ಷದಲ್ಲಿ ಸಾವಯವ ಕೃಷಿಕರ ಸಂಖ್ಯೆ ಐದು ಲಕ್ಷವಾಗುತ್ತದೆ. ಈ ನಿಟ್ಟಿನಲ್ಲಿ ಸಾವಯವ ಕೃಷಿ ಮಿಷನ್ ಕೂಡ ಕಾರ್ಯಕ್ರಮ ರೂಪಿಸಬೇಕೆಂದರು.
ರೈತರೊಂದಿಗೆ ಮೋದಿ ಮಾತು:
ಪ್ರಧಾನಿ ನರೇಂದ್ರ ಮೋದಿ ಜ.3ರಂದು ರಾಜ್ಯಕ್ಕೆ ಆಗಮಿಸಲಿದ್ದು, ತುಮಕೂರಿನಲ್ಲಿ ಅಂದು ಮಧ್ಯಾಹ್ನ 12ಕ್ಕೆ ರೈತರೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ಯಡಿಯೂರಪ್ಪ ತಿಳಿಸಿದರು.
ಬಜೆಟ್ ನಲ್ಲಿ ಸಾವಯವ ಕೃಷಿಕರಿಗೆ ಉತ್ತೇಜನ: ಸಿಎಂ
Follow Us